ಉಡುಪಿ: ಚುನಾವಣೆಯಲ್ಲಿ ನೋಟಾಕ್ಕೆ ಮತ ಹಾಕುವಂತೆ ಹೇಳುವುದು ಅಪರಾಧವಂತೆ ಹಾಗಾಗಿ ನೀವು ಒಂದು ವೇಳೆ ನೀವು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪಕ್ಷ ಅಥವಾ ವ್ಯಕ್ತಿ ವಿರುದ್ಧ ನೋಟಾ ಅಭಿಯಾನ ಮಾಡಿದರೆ ಅವರ ಮೇಲೆ ಕೇಸ್ ದಾಖಲಾಗುತ್ತದೆ ಎಂದು ಉಡುಪಿ ಡಿಸಿ ಹೆಪ್ಸಿಬಾ ರಾಣಿ ಕೊರ್ಲಾಪಾಟಿ ಅವರು ಹೇಳಿದ್ದಾರೆ.

ಸುದ್ದಿಗಾರರ ಜೊತೆಗೆ ಚುನಾವಣಾ ಸಂಬಂಧಿ ವಿಷಯಕ್ಕೆ ಸಂಬಂಧಪಟ್ಟಂತೆ ಮಾತನಾಡಿದರು, ಇದೇ ವೇಳೆ ಅವರು ಮಾತನಾಡುತ್ತ ಕೆಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ನೋಟ ಚಲಾವಣೆ ಮಾಡುವಂತೆ ಪ್ರಚಾರ ನಡೆಸುತ್ತಿದ್ದಾರೆ. ಇದು ಕಾನೂನು ವಿರುದ್ದವಾಗಿದ್ದು, ಒಂದು ವೇಳೆ ನೋಟಾ ಪರ ಅಭಿಯಾನ ಮಾಡಿದ್ರೆ ಮೇಲೆ ಕೇಸು ಬೀಳುತ್ತದೆ ಅಂತ ನೋಟಾ ಪರ ಅಭಿಯಾನ ಮಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ.