ಬೆಂಗಳೂರು, ಕಳೆದ ವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಜೂನ್ 5 ರಂದು ಹೊಸ  ಬಜೆಟ್ ಮಂಡಿಸುತ್ತೇನೆ ಅಂತ ಹೇಳಿದ್ದಾರು. ಯವಾಗ ಬಜೆಟ್ ಮಂಡನೆ ಸುದ್ದಿ ಆಯಿತು. ಆಗ ಪರ ವಿರೋಧ ವ್ಯಕ್ತವಾಗಿದೆ. ಕೆಲವರು ಪೂರಕ ಬಜೆಟ್ ಮಂಡಿಸಿದ್ರೆ ಸಾಕು ಅಂತ ಹೇಳಿದ್ರೆ ಇಲ್ಲ ಹೊಸ ಸರಕಾರ ಬಂದಾಗ ಹೊಸ ಬಜೆಟ್ ಮಂಡಿಸುವುದು ವಾಡಿಕೆ ಹೀಗೆ ಕಾಂಗ್ರೆಸ್ ವಲಯದಲ್ಲಿ ಬಜೆಟ್ ಚರ್ಚೆ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈಗ ಸ್ವತಃ ಕುಮಾರಸ್ವಾಮಿಯವರು ಮಾತನಾಡುತ್ತಾ, ನಾನು ಬಜೆಟ್ ಮಂಡಿಸುತ್ತೇನೋ ಇಲ್ಲವೋ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ರೈತರ ಸಾಲ‌ ಮನ್ನಾ ‌ವಿಚಾರ ಮತ್ತು ಸಹಕಾರ ಇಲಾಖೆಗೆ ಸಂಬಂಧಪಟ್ಟಂತೆ ವಿಧಾನಸೌಧದಲ್ಲಿ ಸೋಮವಾರ ನಡೆದ ರಾಜ್ಯದ ಎಲ್ಲಾ ಜಿಲ್ಲಾ ಸಹಕಾರಿ ಬ್ಯಾಂಕುಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರುಗಳು ಹಾಗೂ ಅಪೆಕ್ಸ್ ಬ್ಯಾಂಕ್ ಮತ್ತು ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ರಾಜ್ಯದಲ್ಲಿ ಕಳೆದ ಬಾರಿ ಇದ್ದವರ ಪೈಕಿ 100 ಶಾಸಕರು ಈ ಬಾರಿ ಸೋತಿದ್ದಾರೆ. ಆದ್ದರಿಂದ ಕಳೆದ ಸರ್ಕಾರದ ಬಜೆಟ್ ನ್ನೇ ಅಂಗೀಕರಿಸಿ ಲೇಖಾನುದಾನ ಪಡೆಯುವುದಾದರೆ ಈಗಿನ 100 ಶಾಸಕರಿಗೆ ತೊಂದರೆಯಾಗುತ್ತದೆ .ಅವರೇನಾದರೂ ಹಕ್ಕುಚ್ಯುತಿ ತಂದರೆ ಏನು‌ ಮಾಡೋದು. ಅದಕ್ಕಾಗಿಯೇ ಹೊಸ ಬಜೆಟ್ ಮಂಡನೆಗೆ ಮುಂದಾಗಿದ್ದೇನೆ ಅಂತ ಹೇಳಿದ್ದಾರೆ. ಒಟ್ಟಿನಲ್ಲಿ ಬಜೆಟ್ ಚರ್ಚೆ ಮಾತ್ರ ದಿನದಿಂದ ದಿನಕ್ಕೆ ಹೋಸ ತಿರುವುಪಡೆದುಕೊಳ್ಳುತ್ತಿದೆ.