ಬೆಂಗಳೂರು: ನೀವು ಎಂದಾದರೂ ನುಗ್ಗೆಕಾಯಿ ಒಂದು ಕೆಜಿ ಬೆಲೆ ಎಷ್ಟು ಎಂದು ಕೇಳಿದರೆ 40 ಬೇಡ 50 ರೂ ಅಂದ್ರೆ ಹೆಚ್ಚು ಆದರೆ  ನಿನ್ನೆ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ಬೆಲೆ 300 ರೂ.!

ಶುಕ್ರವಾರ ಒಂದು ಕೆಜಿ ನುಗ್ಗೆಕಾಯಿ 312 ರೂ.ಗೆ ಮಾರಾಟವಾಗುತ್ತಿತ್ತು. ಒಂದು ಕೆ.ಜಿ ನುಗ್ಗೆಕಾಯಿಯು 349 ರೂಪಾಯಿಗೆ ಮಾರಾಟವಾಗುತ್ತಿದೆ. ಈ ದರವು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತರಕಾರಿ ವ್ಯಾಪಾರಿಗಳು ಹೇಳುತ್ತಿದ್ದು, ಹೀಗೆ ದರ ಸಾಗಿದರೆ ಕೆಜಿಗೆ 400ರೂಗಳಿಗೆ ತಲುಪಲಿದೆ ಎನ್ನಲಾಗಿದೆ. ಇದು ಊಹಿಸಲಕ್ಕೂ ಸಾಧ್ಯವಿಲ್ಲ. ಆದರೂ ಸತ್ಯ.!