ಬೆಂಗಳೂರು: ಸಾಮಾನ್ಯವಾಗಿ ಎಟಿಎಂ ಕಾರ್ಡ್ ಕಳೆದು ಹೋದರೆ ಮುಂದೇನು? ಎಂಬ ಪ್ರಶ್ನೆ ಸಹಜ. ಒಂದು ವೇಳೆ ನೀವು SBI ಗ್ರಾಹಕರಾಗಿದ್ದರೆ, ಸಹಾಯವಾಣಿ 1800 11 2211, 1800 425 3800 ಅಥವಾ 080 2659 9990 ಗೆ ಕರೆ ಮಾಡಬಹುದು.

ಆನ್ಲೈನ್ ಮೂಲಕ ಕೂಡ ಕಾರ್ಡ್ ಬ್ಲಾಕ್ ಮಾಡಬಹುದು. ಗ್ರಾಹಕರು www.onlinesbi.com ಗೆ ಲಾಗಿನ್ ಆಗುವ ಮೂಲಕ ಕೂಡಾ ಎಟಿಎಂ ಕಾರ್ಡ್ ಬ್ಲಾಕ್ ಮಾಡಬಹುದಾಗಿದೆ. ಹೊಸ ಕಾರ್ಡ್ ಗೆ ಆನ್ಲೈನ್ ನಲ್ಲಿಯೇ ಅರ್ಜಿ ಸಲ್ಲಿಸಬಹುದಾಗಿದ್ದು, www.onlinesbi.com ಗೆ ಲಾಗಿನ್ ಮಾಡಿ.