ಬೆಂಗಳೂರು: ಸಿನಿಮಾ ದಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ ಸೋನ್ ಸೂದ್. ಜೀವನದಲ್ಲಿ ಮಾತ್ರ  ಅಪ್ಪಟ ನೊಂದವರ ಜೀವನದಲ್ಲಿ ರಿಯಲ್ ಹೀರೋ.! ನೊಂದವರಿಗೆ ಸ್ಪಂದಿಸುವ ಮೂಲಕ ರಿಯಲ್‌ ಹೀರೋ ಎಂದು ಕರೆಸಿಕೊಳ್ಳುತ್ತಿರುವ ಸೋನು ಸೂದ್ ಇದೀಗ ಐಎಎಸ್ ಆಕಾಂಕ್ಷಿಗಳಿಗೆ ಪ್ರೋತ್ಸಾಹ ನೀಡಲು ಮುಂದಾಗಿದ್ದಾರೆ.

ಈ ಬಗ್ಗೆ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಅ.13ರಂದು ನನ್ನ ತಾಯಿ ಮೃತಪಟ್ಟಿದ್ದರು. ಅವರ ಪುಣ್ಯಸ್ಮರಣೆಯೊಂದಿಗೆ ಐಎಎಸ್ ಆಕಾಂಕ್ಷಿಗಳಿಗೆ ನೆರವಾಗುವ ಪ್ರತಿಜ್ಞೆ ಮಾಡುತ್ತಿದ್ದೇನೆ. ಪ್ರೊ.ಸರೋಜ್ ಸೂದ್ ಸ್ಕಾಲರ್‌ಶಿಪ್ ಮೂಲಕ ಐಎಎಸ್ ಆಕಾಂಕ್ಷಿಗಳು ಅವರ ಗುರಿ ತಲುಪಲು ನೆರವಾಗಲಿದ್ದೇನೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.