ಬೆಂಗಳೂರು: ನೀವು ವೊಡಾಫೋನ್ ಅಥವ ಏರ್ಟೆಲ್ ಗ್ರಾಹಕರಾದರೆ ಈ ಸುದ್ದಿ ಓದಿ. ಈಗಾಗಲೇ ವೊಡಾಫೋನ್ ಐಡಿಯಾ ಕಂಪನಿ. ಡಿ.1ರಿಂದ ಮೊಬೈಲ್ ಟಾರಿಫ್ ದರ ಹೆಚ್ಚಿಸುವುದಾಗಿ ಘೋಷಿಸಿದೆ.

ಇದರ ಬೆನ್ನಲೇ ಭಾರತಿ ಏರ್ಟೆಲ್ ಟೆಲಿಕಾಂ ಕಂಪನಿ ಕೂಡ ದರ ಹೆಚ್ಚಿಸುವುದಾಗಿ ಹೇಳಿದೆ. ಈ ಮೂಲಕ ಗ್ರಾಹಕರಿಗೆ ಮೊಬೈಲ್ ಸೇವೆಗಳು ಮತ್ತಷ್ಟು ಹೊರೆಯಾಗುವ ಸಾಧ್ಯತೆ ಇದೆ.

ಈ ಟೆಲಿಕಾಂ ಕಂಪನಿಗಳು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದಾಖಲೆ ಮಟ್ಟದಲ್ಲಿ ನಷ್ಟ ಅನುಭವಿಸಿದ್ದಾಗಿ ವರದಿ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದೆ. ಡಿಸೆಂಬರ್ ನಿಂದ ಗ್ರಾಹಕರಿಗೆ ಮೊಬೈಲ್ ಸೇವೆ ಹೊರೆಯಾಗುವ ಸಾಧ್ಯತೆ ಇದೆ.!