ಬೆಂಗಳೂರು: ಏನಪ್ಪ ಅಂದ್ರೆ  ವಾಹನ ಚಾಲಕರು ಇನ್ಮುಂದೆ ಚಾಲನಾ ಪರವಾನಗಿ, ವಾಯುಮಾಲಿನ್ಯ ಪ್ರಮಾಣಪತ್ರ, ವಾಹನ ನೋಂದಣಿ ಪ್ರಮಾಣ ಪತ್ರವನ್ನು ಜತೆಯಲ್ಲಿ ತೆಗೆದುಕೊಂಡು ಹೋಗಬೇಕಾದ ಅಗತ್ಯವಿಲ್ಲ. ಇದಲ್ಲದೇ ಟ್ರಾಫಿಕ್ ಪೊಲೀಸರು ಹಾಗೂ ಆರ್ ಟಿ ಓ ಅಧಿಕಾರಿಗಳು ವಾಹನದ ದಾಖಲೆಗಳನ್ನು ಕೇಳಿದ್ರೆ, ಮೊಬೈಲ್ನಲ್ಲೇ ತೋರಿಸಬಹುದಾಗಿದೆ.

ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜ್ಯ ಸಾರಿಗೆ ಇಲಾಖೆ ಆಯುಕ್ತ ಬಿ.ದಯಾನಂದ್, ” ಸಂಚಾರ ಪೊಲೀಸರು ವಾಹನ ತಪಾಸಣೆ ನಡೆಸುವ ಸಂದರ್ಭದಲ್ಲಿ ಡಿಜಿ ಲಾಕರ್ನಲ್ಲಿನ ದಾಖಲೆ ತೋರಿಸಬಹುದು. ಸಾಫ್ಟ್ ಕಾಪಿ ಎಂಬ ಕಾರಣಕ್ಕೆ ದಾಖಲೆಗಳನ್ನು ಅಧಿಕಾರಿಗಳು ತಿರಸ್ಕರಿಸುವಂತಿಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾರೆ.

ಇದೇ ವೇಳೆ ಅವರು ಅಧಿಕಾರಿಗಳು ವಾಹನ ಮಾಲೀಕರಿಂದ ಹಾರ್ಡ್ ಕಾಪಿ ಕೇಳುವಂತೆಯೂ ಇಲ್ಲ,’ ಎಂದು ಹೇಳಿದರು.

ಸಾರಿಗೆ ಇಲಾಖೆಯು ದಾಖಲೆಗಳು ಮತ್ತು ಪ್ರಮಾಣಪತ್ರಗಳನ್ನು ವಿದ್ಯುನ್ಮಾನ (ಡಿಜಿಟಲ್) ರೂಪದಲ್ಲಿ ಸಂಗ್ರಹಿಸಿ, ಪ್ರದರ್ಶಿಸುವ ಹಾಗೂ ದೃಢೀಕರಿಸುವ ‘ಡಿಜಿ ಲಾಕರ್’ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ಡಿಜಿ ಲಾಕರ್ನಲ್ಲಿ ಅಡಕಗೊಳಿಸಿರುವ ಡಿಎಲ್, ಆರ್ಸಿ ಬುಕ್ ಮತ್ತು ಮಾಲಿನ್ಯ ಪ್ರಮಾಣಪತ್ರಗಳನ್ನು ಮೂಲ ದಾಖಲೆಗಳೆಂದು ಪರಿಗಣಿಸಿ ಕಾನೂನಾತ್ಮಕವಾಗಿ ಅಂಗೀಕರಿಸಬೇಕೆಂದು ಅಧಿಸೂಚನೆ ಹೊರಡಿಸಿದ್ದು ಈ ಮೂಲಕ ವಾಹನ ಚಾಲಕರಿಗೆ ಗುಡ್ ನ್ಯೂಸ್ ಅಲ್ಲದೆ ಮತ್ತೇನು ಅಲ್ವ.!