ನವದೆಹಲಿ : ವಾಟ್ಸಪ್ ತನ್ನ ಬಳಕೆದಾರರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಒಂದೇ ವಾಟ್ಸಪ್ ಅಕೌಂಟ್ ಅನ್ನು ನಾಲ್ಕು ಡಿವೈಸ್ ಗಳಲ್ಲಿ ಬಳಕೆ ಮಾಡಬಹುದಾದ ಆಯ್ಕೆ ನೀಡಲು ವಾಟ್ಸಪ್ ಸಂಸ್ಥೆ ಮುಂದಾಗಿದೆ.

ಸದ್ಯ ವಾಟ್ಸಪ್ ಅಕೌಂಟ್ ಅನ್ನು ಒಂದೇ ಡಿವೈಸ್ ನಲ್ಲಿ ಮಾತ್ರವೇ ಬಳಸಬಹುದು. ನಿಮ್ಮ ಮೊಬೈಲ್ ನಲ್ಲಿ ವಾಟ್ಸಪ್ ಇನ್ ಸ್ಟಾಲ್ ಆಗಿ ಅದನ್ನು ನೀವು ಬಳಸುತ್ತಿದ್ದರೆ, ಅದನ್ನು ಮತ್ತೊಂದು ಮೊಬೈಲ್ ನಲ್ಲಿ ಬಳಸಲು ಬರುವುದಿಲ್ಲ. ವೆಬ್ ವಾಟ್ಸಪ್ ಆಯ್ಕೆ ಇದೆಯಾದರೂ ಅದು ಮೊಬೈಲ್ ನಲ್ಲಿರು ವಾಟ್ಸಪ್ ನಂತೆ ಇರುವುದಿಲ್ಲ. ಹೀಗಾಗಿ ತನ್ನ ಬಳಕೆದಾರರಿಗೆ ವಾಟ್ಸಪ್ ಹೊಸ ಸೌಲಭ್ಯ ಪರಿಚಯಿಸಲು ಮುಂದಾಗಿದೆ.

ಒಂದು ವಾಟ್ಸಪ್ ಅಕೌಂಟ್ ಇದ್ದರೆ ಅದನ್ನು ಮೊಬೈಲ್, ಕಂಪ್ಯೂಟರ್, ಟ್ಯಾಬ್ ಹಾಗೂ ಲ್ಯಾಪ್ ಟಾಪ್ ಸೇರಿದಂತೆ ಏಕಕಾಲಕ್ಕೆ 4 ಡಿವೈಸ್ ಗಳಲ್ಲಿ ಬಳಸಬಹುದಾಗಿದೆ.