ಬೆಂಗಳೂರು: ಲಕ್ಷ್ಮಿ ವಿಲಾಸ್ ಬ್ಯಾಂಕ್ ಗ್ರಾಹಕರ ಹಣ ವಿತ್ ಡ್ರಾಗೆ ಸರ್ಕಾರ ಮಿತಿ ಹೇರಿದ್ದು, ಗ್ರಾಹಕರು ಡಿ.16ರವರೆಗೆ ಕೇವಲ 25 ಸಾವಿರ ರೂ. ಮಾತ್ರ ವಿತ್ ಡ್ರಾ ಮಾಡಬಹುದಾಗಿದೆ.

ಸಂಜೆ 6 ಗಂಟೆಯಿಂದ ಡಿ.16ರವರೆಗೆ ಬ್ಯಾಂಕ್ ಮೊರೆಟೋರಿಯಂ ಅವಧಿಗೊಳಪಡಲಿದ್ದು, ₹25,000ಕ್ಕಿಂತ ಹೆಚ್ಚು ಹಣ ಹಿಂಪಡೆಯುವುದನ್ನು ನಿರ್ಬಂಧಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

ಬ್ಯಾಂಕ್ ನ ಸಾಲ ಪ್ರಮಾಣ ಹೆಚ್ಚಳ ಹಾಗೂ ನಷ್ಟದ ಭೀತಿ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರೀಯ ಬ್ಯಾಂಕ್ ಹೇಳಿದೆ.!