ಬೆಂಗಳೂರು: ಬೆಂಗಳೂರಿಗೆ ಬಂದವರಿಗೆ ಮತ್ತೆ ಊರಿನಕಡೆ ಮನಸ್ಸು ಹೊರಳುವುದಿಲ್ಲ. ದೇಶದ ಸಿಲಿಕಾನ್ ಸಿಟಿ, ಗ್ರೀನ್ ಸಿಟಿ, ಅಂತ ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ನೀವು ವಾಸ ಮಾಡ್ತಾ ಇದ್ದೀರಾ? ನೀತಿ ಆಯೋಗ ಬೆಚ್ಚಿ ಬೀಳಿಸುವ ವರದಿನೀಡಿದೆ ಅದೇನಪ್ಪ ಅಂದ್ರೆ ಮುಂಬರುವ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಅಂತರ್ಜಲ ಖಾಲಿಯಾಗಲಿದೆ ಎಂದು ನೀತಿ ಆಯೋಗದ ವರದಿಯೊಂದು ನೀಡಿದ್ದು, ಭವಿಷ್ಯದಲ್ಲಿ ನೀರು ಸಿಗದೇ ಹೋಗುವ ಸನ್ನಿವೇಶ ನಿರ್ಮಾಣವಾಗುವ ಸಾಧ್ಯತೆ ಇದೆಯಂತೆ.

ಏಕೆಂದರೆ ಬೆಂಗಳೂರು ಕಾಂಕ್ರೀಟ್ ಕಾಡಾಗಿ ಬದಲಾಗಿದೆ. ಇಲ್ಲಿ ಮಳೆಯ ನೀರು ಭೂಮಿಯೊಳಗೆ ಹಿಂಗಿ ಹೋಗುತ್ತಿಲ್ಲ. ಹೀಗಾಗಿ ಅಂತರ್ಜಲ ಭರ್ತಿಯಾಗುತ್ತಿಲ್ಲ.ನೀರನ್ನು ಪುನರ್ ಬಳಕೆ ಮಾಡುವ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಬೆಂಗಳೂರಿನಲ್ಲಿರುವ ಕೆರೆಗಳನ್ನು ಮರು ನಿರ್ಮಾಣವಾಗುತ್ತಿಲ್ಲ. ಮತ್ತು ಮಳೆಗಾಲದಲ್ಲಿ ಬೀಳುವ ಮಳೆನೀರು ಕೊಯ್ಲು ಮಾಡುವ ವ್ಯವಸ್ಥೆಯ ಮೂಲಕ ಅಂತರ್ಜಲ ಭರ್ತಿ ಮಾಡುವ ಬಗ್ಗೆ ಯಾರು ಗಮನಹರಸುತ್ತಿಲ್ಲ.

ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಬೆಂಗಳೂರು ಖಾಲಿ ಖಾಲಿ ಆಗುವ ಸಾಧ್ಯತೆ ಇದೆ. ಹಾಗಾಗಿ ಈಗಿನಿಂದಲೇ ಮಳೆ ನೀರನ್ನು ಸದ್ಬಳಿಕೆ ಮಾಡಬೇಕು ಅಂತರ್ಜಲ ತುಂಬಿಸುವಲ್ಲಿ ಮುಂದಾಗಬೇಕು ಎಂದು ವರದಿಯಲ್ಲಿ ನೀಡಿದೆ.

(ಸಾಂದರ್ಭಿಕ ಚಿತ್ರ)