ಬೆಂಗಳೂರು: 6686 ಪೊಲೀಸ್ ಕಾನ್ಸ್ ಟೇಬಲ್ ನೇಮಕ ಪ್ರಕ್ರಿಯೆ ಆರಂಭವಾದ ಬೆನ್ನಲ್ಲೇ 162 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆನ್ಲೈನ್ ನಲ್ಲಿ ಜೂನ್ 26 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.  ಪೊಲೀಸ್ ಸಬ್ ಇನ್ಸ್ ಪೆಕ್ಟರ್ 40 ಹುದ್ದೆ, ಸಶಸ್ತ್ರ ಮೀಸಲು ಪೊಲೀಸ್ ಸಬ್ ಇನ್ಸ್ ಪೆಕ್ಟರ್ 45 ಹುದ್ದೆ, ಕೆಎಸ್‌ಐಎಸ್‌ಎಫ್ ಸಬ್‌ಇನ್ಸ್ ಪೆಕ್ಟರ್ 51 ಹುದ್ದೆ, ವೈರ್ ಲೆಸ್ ಸಬ್ ಇನ್ಸ್ ಪೆಕ್ಟರ್ 26 ಸೇರಿದಂತೆ 162 ಪಿಎಸ್‌ಐ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.