ಬೆಂಗಳೂರು: ನಗರ ಪೊಲೀಸ್ ಇಲಾಖೆಗೆ ಸ್ವಯಂಸೇವಕರು ಬೇಕಾಗಿದ್ದಾರೆ.

ಪ್ರತಿ ಠಾಣೆಗೆ 18 ರಿಂದ 40 ವರ್ಷದ ನಡುವಿನ 100 ಸ್ವಯಂ ಸೇವಕರ ಅಗತ್ಯವಿದ್ದು, ವಾರದಲ್ಲಿ 10 ಗಂಟೆ ಅವರ ಸೇವೆ ಪಡೆಯಲಾಗುತ್ತದೆ. ಅವರಿಗೆ ಜಾಕೆಟ್ ಹಾಗೂ ಕ್ಯಾಪ್ ನೀಡಲಾಗುತ್ತದೆ. ಲಾಠಿಕೊಡುವುದಿಲ್ಲ.

ಪೊಲೀಸರ ಜೊತೆಗಿದ್ದು, ಬ್ಯಾರಿಕೇಡ್ ಅಳವಡಿಸುವುದು, ಠಾಣೆಗಳಲ್ಲಿ ಹೆಲ್ಪ್ ಡೆಸ್ಕ್, ಬರಹ ಸೇವೆಗೆ ನಿಯೋಜಿಸಲಾಗುತ್ತದೆ. ಆಸಕ್ತರು ವೆಬ್ ಸೈಟ್ www.bcp.gov.in ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.