ಬೆಂಗಳೂರು: ಜವಾಹರ್ ನವೋದಯ ವಿದ್ಯಾಲಯ ಸಮಿತಿಯು ಪೋಸ್ಟ್‌ ಗ್ರಾಜುಯೇಟ್‌ ಟೀಚರ್, ಟ್ರೈನ್ಡ್‌ ಗ್ರಾಜುಯೇಟ್‌ ಟೀಚರ್‌ ಮತ್ತು ಫ್ಯಾಕಲ್ಟಿ ಕಮ್ ಸಿಸ್ಟಮ್‌ ಅಡ್ಮಿನಿಸ್ಟ್ರೇಟರ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ.

ಒಟ್ಟು 454 ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ ಹೊಂದಿರಬೇಕು. ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ ಸೆ.11 ಆಗಿದ್ದು, ಅರ್ಜಿ ಸಲ್ಲಿಸಲು ಕಡೆ ದಿನ ಸೆ.15-17 ಹೆಚ್ಚಿನ ಮಾಹಿತಿಗೆ https://navodaya.gov.inಗೆ ಸಂಪರ್ಕಿಸಬಹುದು.