ನವದೆಹಲಿ: ಕೊರೋನಾ ಹರಡದಂತೆ ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಘೋಷಿಸಿರುವುದರಿಂದ ವಿಮೆ (ಇನ್ಸೂರೆನ್ಸ್) ಕಂತು ಪಾವತಿಸಲಾಗದವರಿಗೆ ವಿಮೆ ನಿಯಂತ್ರಣ ಪ್ರಾಧಿಕಾರ ಶುಭ ಸುದ್ದಿಯೊಂದನ್ನು ನೀಡಿದೆ.

ವಿಮೆ ಪಾಲಿಸಿದಾರರಿಗೆ ವಿಮೆ ಕಂತು ಕಟ್ಟಲು 30 ದಿನಗಳ ಹೆಚ್ಚುವರಿ ಅವಧಿಯನ್ನು ನೀಡಲಾಗಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪಾಲಿಸಿಗಳ ವಿಮಾ ಕಂತು ಕಟ್ಟುವ ಕೊನೆಯ ದಿನಾಂಕ ಹೊಂದಿದವರಿಗೆ ವಿಸ್ತರಣೆ ಅನ್ವಯವಾಗಲಿದೆಯಂತೆ.!