ಬೆಂಗಳೂರು: ನೀವು ಎದ್ದ ಕೂಡಲೇ ಬೆಳಿಗ್ಗೆ ಮೊದಲು ಏನು ಮಾಡುತ್ತೀರಿ? ನಿಮ್ಮ ಫೋನ್ ಎತ್ತಿಕೊಂಡು ವಾಟ್ಸಾಪ್ ಸಂದೇಶಗಳು, ಇಮೇಲ್‌ಗಳು ಮತ್ತು ಇನ್‌ಸ್ಟಾಗ್ರಾಮ್ ನಲ್ಲಿ ಬಂದ ಸಂದೇಶಗಳನ್ನು ನೋಡ್ತೀರಾ.! ಹೀಗೆ ಮಾಡುವುದು ನಿಮ್ಮ ಆರೋಗ್ಯದ ಮೇಲೆ ಕೆಟ್ಟಪರಿಣಾಮ ಬೀರುತ್ತದೆ ಎನ್ನುತ್ತವೆ ಸಂಶೋಧನೆ

ಐಡಿಸಿ ನಡೆಸಿದ ಅಧ್ಯಯನದ ಪ್ರಕಾರ, ಸುಮಾರು 80 ಪ್ರತಿಶತದಷ್ಟು ಸ್ಮಾರ್ಟ್‌ಫೋನ್‌ಗಳು ಬಳಕೆದಾರರು ಎಚ್ಚರವಾದ ಮೊದಲ 15 ನಿಮಿಷಗಳಲ್ಲಿ, 5 ಜನರಲ್ಲಿ 4 ಜನರು ತಮ್ಮ ಫೋನ್‌ಗಳನ್ನು ಪರಿಶೀಲಿಸುತ್ತಾರೆ ಎನ್ನಲಾಗಿದೆ.

ನಿದ್ದೆಯಿಂದ ಎದ್ದ ಕೂಡಲೇ ಮೊಬೈಲ್‌ ಪರಿಶೀಲನೆ ಮಾಡಿದರೆ ಆಗೋದು ಏನು

ಹಾಸಿಗೆಯಿಂದ ಎದ್ದ ಕೂಡಲೇ ನೀವು ನಿಮ್ಮ ಮೊಬೈಲ್‌ ಅನ್ನು ಪರಿಶೀಲನೆ ಮಾಡಿದರೆ ಅದು ನಿಮ್ಮ ಮನಸ್ಸಿನ ಶಾಂತಿಗೆ ಅಡ್ಡಿಯಾಗುತ್ತದೆ. ಕೆಲವು ಮಾಹಿತಿಗಳು ನಿಮ್ಮ ದಿನವನ್ನು ಪ್ರಾರಂಭಿಸಿದಾಗ, ಅದು ಒತ್ತಡ ಮತ್ತು ಆತಂಕವನ್ನು ಪ್ರಚೋದಿಸುತ್ತದೆ ಎನ್ನಲಾಗಿದೆ.

ನಾವು ಎದ್ದ ಕೂಡಲೇ ಮೊಬೈಲ್ ಅನ್ನು ನೋಡುವ ಬದಲು ಮೊದಲು ನಿಮ್ಮ ದಿನವನ್ನು ಕೆಲವು ಆರೋಗ್ಯಕರ ಅಭ್ಯಾಸಗಳೊಂದಿಗೆ ಪ್ರಾರಂಭಿಸಿ – ಧ್ಯಾನ ಮಾಡುವುದು, ಒಂದು ಲೋಟ ಬೆಚ್ಚಗಿನ ನೀರು ಕುಡಿಯುವುದು, ವ್ಯಾಯಾಮ ಮಾಡುವುದು, ನಿಮ್ಮ ಕಾರ್ಯಗಳಿಗೆ ಆದ್ಯತೆ ನೀಡುವುದು ಇತ್ಯಾದಿ.