ಬೆಂಗಳೂರು: ಎಣ್ಣೆ ಕುಡಿಯುವವರಿಗೆ ಕೊರೋನಾ ಬರಲ್ವಂತೆ ಅಂತ ಹೇಳುವವರನ್ನು ಕೇಳಿರುತ್ತೀರ. ಹಾಗಾದ್ರೆ ಈ ಸುದ್ದಿ ಓದಿದ ಮೇಲೆ ತೀರ್ಮಾನ ನಿಮ್ಮದು.

ಮದ್ಯ ಸೇವಿಸುವವರಿಗೆ ಕೊರೋನಾದಿಂದ ಗಂಭೀರ ಸಮಸ್ಯೆ ಎದುರಾಗಲಿದ್ದು, ‘ಮದ್ಯ ಪ್ರಿಯರ’ ಲಿವರ್ ಮೇಲೆ ಕೊರೋನಾ ಪ್ರಭಾವ ಅಪಾರವಾಗಿರುತ್ತದೆ ಎಂದು ಬೆಂಗಳೂರಿನ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಸೋಂಕಿನಿಂದ ಮೃತಪಟ್ಟ ಕೆಲವರಲ್ಲಿ ಲಿವರ್ ಸಮಸ್ಯೆ ಕಂಡು ಬಂದಿದ್ದು, ಹೀಗಾಗಿ ವೈದ್ಯರು ಮದ್ಯಪಾನ ಮಾಡುವವರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಸೋಂಕಿತರು ಲಿವರ್ ಮೇಲಾಗುವ ಪರಿಣಾಮದ ಬಗ್ಗೆ ಎಚ್ಚರಿಕೆ ವಹಿಸಬೇಕು. ಶೇ.20-35ರಷ್ಟು ಸೋಂಕಿತರಲ್ಲಿ ಲಿವರ್ ಸಮಸ್ಯೆ ಕಂಡು ಬಂದಿದೆ. ಎಂದು ತಿಳಿದುಬಂದಿದೆ. ಹಾಗಾದ್ರೆ ಎಣ್ಣೆ ಕುಡಿಯುವುದು ನಿಮಗೆ ಬಿಟ್ಟಿದ್ದು.!