ನವದೆಹಲಿ: ಭಾರತದಲ್ಲಿನ ಬಳಕೆದಾರರಿಗೆ ಸಿಹಿಸುದ್ದಿ ನೀಡಿರುವ ‘ವಾಟ್ಸ್ ಅಪ್’, ಸ್ಟೇಟಸ್ ಅವಧಿಯ ಮಿತಿಯನ್ನು 15ರಿಂದ 30 ಸೆಕೆಂಡ್​ಗಳಿಗೆ ಮರು ಏರಿಕೆ ಮಾಡಿದೆ.

ಆಂಡ್ರಾಯ್ಡ್‌ ಆವೃತ್ತಿ 2.20.166 ಅಪ್ಡೇಟೆಡ್​ ವರ್ಷನ್​ನಲ್ಲಿ ಈ ಫೀಚರ್​ ಲಭ್ಯವಾಗಲಿದೆ. ನಕಲಿ ಸುದ್ದಿಗಳ ನಿಯಂತ್ರಣ ಮತ್ತು ಸರ್ವರ್​ ದಟ್ಟಣೆ ಕಡಿಮೆ ಮಾಡಲು ಫೀಚರ್​ ಅವಧಿಯನ್ನು ಭಾರತದಲ್ಲಿ ಕೆಲ ತಿಂಗಳುಗಳಿಂದ 30 ಸೆಕೆಂಡ್​ನಿಂದ 15ಕ್ಕೆ ಇಳಿಸಲಾಗಿತ್ತು. ಇದೀಗ ಮರಳಿ 30 ಸೆಕೆಂಡ್​ಗೆ ಏರಿಸಲಾಗಿದೆ.