ಚಿಕ್ಕಮಗಳೂರು : ಸಿದ್ದರಾಮಯ್ಯ ಅವರು ಏನಾದರೂ ತಿಂದು ಸಾಯಲಿ, ನಮಗೂ ಅದಕ್ಕೂ ಸಂಬ0ಧವೇ ಇಲ್ಲ, ಅವರು ಗೋಮಾಂಸ ತಿಂತೀನಿ, ಹಂದಿ ತಿಂತೀನಿ ಅಂತ ಸಿದ್ದರಾಮಯ್ಯ ಹೇಳುತ್ತಾರೆ ಎಂದು ಸಚಿವ ಈಶ್ವರಪ್ಪ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಚಿಕ್ಕಮಗಳೂರಿನ ಜನಸೇವಕ ಸಮಾವೇಶದಲ್ಲಿ ಭಾಗಿಯಾಗಿ ಈಶ್ವರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀನು ನಿಮ್ಮ ಅಪ್ಪನಿಗೆ ಹುಟ್ಟಿದಿಯಾ ಅನ್ನೋದಕ್ಕೆ ಸಾಕ್ಷಿ ಏನು ಎಂದು ಈಶ್ವರಪ್ಪ ಕಾಂಗ್ರೆಸ್ಸಿನವರಿಗೆ ಪ್ರಶ್ನಿಸಿದರು. ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದಾನೆ ಅನ್ನೋದಕ್ಕೆ ಸಾಕ್ಷಿ ಏನು ಅಂತ ಹಿಂದೊಮ್ಮೆ ಕಾಂಗ್ರೆಸ್ಸಿನವರು ನನ್ನ ಹತ್ತಿರ ಪ್ರಶ್ನೆ ಮಾಡಿದ್ದರು. ಅವರು ರಾಮನ ಬಗ್ಗೆ ಹೀಗೆ ಪ್ರಶ್ನೆ ಮಾಡಿದ್ರು, ನಾನು ಅವರಲ್ಲಿ ಒಂದು ಪ್ರಶ್ನೆ ಕೇಳುತ್ತೇನೆ. ನೀನು ನಿಮ್ಮ ಅಪ್ಪನಿಗೆ ಹುಟ್ಟಿದಿಯಾ ಅನ್ನೋದಕ್ಕೆ ಸಾಕ್ಷಿ ಏನು ಅಂತ ಕೇಳ್ತೀನಿ ಎಂದು ಕಿಡಿಕಾರಿದರು