ಮೈಸೂರು: 1998ರಲ್ಲಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದಾಗ ತಮ್ಮ ಪ್ರಭಾವ ಬಳಸಿ‌ ಹಿನಕಲ್ ಬಳಿ ರಚನೆಯಾದ ಮುಡಾ ನಿವೇಶನ ಪೈಕಿ 30ಗುಂಟೆ ಜಮೀನನ್ನು ಡಿನೋಟಿಫೈ ಮಾಡಿಸಿದ್ದರು. ಹಿನಕಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಾಪಣ್ಣ ಅವರ ಕುಟುಂಬಕ್ಕೆ ಸೇರಿದ ಈ ಜಮೀನಿನಲ್ಲಿ 10 ಗುಂಟೆ ನಿವೇಶನ ಖರೀದಿಸಿದ್ದಲ್ಲದೇ, ಪಕ್ಕದ ಜಮೀನನ್ನು ಅತಿಕ್ರಮಿಸಿ ಹೆಚ್ಚುವರಿ ಅಳತೆಯಲ್ಲಿ ಮನೆ ಕಟ್ಟಿದ್ದರು ಎಂದು ಆರೋಪಿಸಲಾಗಿದ್ದು ಎಫ್ಐಆರ್ ದಾಖಲಿಸಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯ, ಮುಡಾ ಮಾಜಿ ಅಧ್ಯಕ್ಷರಾದ ಸಿ.ಬಸವೇಗೌಡ, ಡಿ.ಧ್ರುವಕುಮಾರ್, ಮುಡಾ ಆಯುಕ್ತ ಕಾಂತರಾಜು ವಿರುದ್ಧ ಮೈಸೂರಿನ 2ನೇ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ಆದೇಶದಂತೆ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ

.ಐಪಿಸಿ ಕಾಲಂ 120ಬಿ, 198, 166, 168, 200, 418, 409 ಹಾಗೂ 468 ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.