ನವದೆಹಲಿ: ಇನ್ನು ಮುಂದೆ  10 ಡಿಜಿಟ್ ಮೊಬೈಲ್ ನಂಬರ್ ಗೆ ಬದಲಾಗಿ ಜುಲೈ 1ರಿಂದ 13 ಡಿಜಿಟ್ ನಂಬರ್ ಗೆ ಚಲಾವಣೆಗೆ ಬರಲಿದೆ.

ಟೆಲಿಕಾಂ ಇಲಾಖೆ ಜುಲೈ 1ರಿಂದ 13 ಡಿಜಿಟ್ ಮೊಬೈಲ್ ನಂಬರ್ ನೀಡುವಂತೆ ಟೆಲಿಕಾಂ ಸಂಸ್ಥೆಗಳಿಗೆ ಆದೇಶ ಹೊರಡಿಸಲಾಗಿದ್ದು ಮುಂದಿನ ದಿನಗಳಲ್ಲಿ ಮೊಬೈಲ್ ಗ್ರಾಹಕರು ತಮ್ಮ ಮೊಬೈಲ್ ನಂಬರ್ ಅನ್ನು 13 ಡಿಜಿಟ್ ಗೆ ಬದಲಾಯಿಸಿಕೊಳ್ಳಬೇಕಿದೆ.

ಜುಲೈ 1ರಿಂದ 13 ಡಿಜಿಟ್ ಮೊಬೈಲ್ ನಂಬರ್ ಬಳಕೆಯಾಗಲಿದ್ದು 2018ರ ಡಿಸೆಂಬರ್ 31ರವರೆಗೆ ಮಾತ್ರ 10 ಡಿಜಿಟ್ ನಂಬರ್ ಬಳಕೆಯಲ್ಲಿದ್ದು ಅಷ್ಟರಲ್ಲಿ ಗ್ರಾಹಕರು ತಮ್ಮ ಸಿಮ್ ನಂಬರ್ ಅನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ ಎಂದು ಟೆಲಿಕಾಂ ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ.