ಚಿತ್ರದುರ್ಗ: ಚಿತ್ರದುರ್ಗ ನಗರಕ್ಕೆ ನೀರು ಸರಬರಾಜು ಮಾಡುವ ಶಾಂತಿಸಾಗರ ನೀರು ಶುದ್ದೀಕರಣ ಘಟಕಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು ಭೇಟಿ ನೀಡಿದ್ದು, ನಗರದಲ್ಲಿರುವ ಎಲ್ಲಾ ಮೇಲ್ಮಟ್ಟ ಹಾಗೂ ನೆಲಮಟ್ಟದ ಜಲಸಂಗ್ರಹಾಗಾರಗಳನ್ನು ಸ್ವಚ್ಛಗೊಳಿಸುವಂತೆ ಸೂಚಿಸಿರುವ ಮೇರೆಗೆ ಎಲ್ಲಾ ಮೇಲ್ಮಟ್ಟ ಹಾಗೂ ನೆಲಮಟ್ಟದ ಜಲಸಂಗ್ರಹಾಗಾರಗಳನ್ನು ಸ್ವಚ್ಛಗೊಳಿಸುತ್ತಿದ್ದು, ಇನ್ನು ಮುಂದೆ ನಗರದ ಯಾವುದೇ ಭಾಗದಲ್ಲಿ ಕಲುಷಿತ ನೀರು ಸರಬರಾಜಾದಲ್ಲಿ ಚಿತ್ರದುರ್ಗ ನಗರಸಭೆಯ ಸಹಾಯವಾಣಿ ನಂ.08194-222401 ಅಥವಾ ಸಹಾಯಕ ಕಾರ್ಯಪಾಲಕ ಅಭಿಯಂತರರರು ಎನ್.ಕೆ.ವಿಶ್ವನಾಥ್ ಇವರ ಮೊಬೈಲ್ ನಂ.9980340462 ಹಾಗೂ ಕಿರಿಯ ಅಭಿಯಂತರರು ಕಿರಣ್‍ಕುಮಾರ್ ಎಸ್.ಆರ್. ಇವರ ಮೊಬೈಲ್ ನಂ.9886787899 ಇವರನ್ನು ಸಂಪರ್ಕಿಸಲು ತಿಳಿಸಿದೆ. ಹಾಗೂ ನೀರನ್ನು ಮಿತವಾಗಿ ಬಳಸಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

( ಸಾಂದಾರ್ಭಿಕ ಚಿತ್ರ)