ಬೆಂಗಳೂರು: ತಲೆನೋವು ಸಮಸ್ಯೆಗೆ ಪರಿಹಾರ ನಿಮ್ಮ ಮನೆಮದ್ದು ಬಳಸಬಹುದು.

ಅವು ಯಾವವು ಅಂದ್ರೆ,  ಕೊಬ್ಬರಿ ಎಣ್ಣೆಗೆ ಲವಂಗದ ಎಣ್ಣೆ ಬೆರೆಸಿ  ಹಣೆಗೆ ಮಸಾಜ್‌ ಮಾಡುವುದು.

ಬಸಳೆ ಸೊಪ್ಪಿನ ರಸ ಹಣೆಗೆ ಹಚ್ಚಿ ನಿದ್ದೆ ಮಾಡುವುದು.

ಪಾಲಾಕ್‌ ಸೊಪ್ಪಿನ ರಸ & ಕ್ಯಾರೆಟ್‌ ರಸ ಬೆರೆಸಿ ಕುಡಿಯುವುದು.

ದಿನವೂ 2-3 ಬಾರಿ 2 ಚಮಚ ಶುಂಠಿ ರಸ ಮತ್ತು 2 ಚಮಚ ನಿಂಬೆ ರಸ ಬೆರೆಸಿ ಕುಡಿಯುವುದು.

ಐಸ್ ನೀರಲ್ಲಿ ಅದ್ದಿದ ಟವೆಲ್‌ನ್ನು ತಲೆಗೆ ಪದೇ ಪದೇ ಹಾಕಿಕೊಳ್ಳುವುದು ಹಾಗೂ ತುಳಸಿ ಎಲೆಯ ರಸ ಶ್ರೀಗಂಧದ ಪುಡಿ ಜೊತೆ ಬೆರೆಸಿ ಹಣೆಗೆ ಹಚ್ಚಿದರೆ ತಲೆ ನೋವು ಉಪಶಮನಾಗುತ್ತದೆ.