ಬೆಂಗಳೂರು: ಬೆಂಗಳೂರಿಗೆ ಅಷ್ಟೆ ಸೀಮಿತವಾಗಿದ್ದ ಇಂದಿರಾ ಕ್ಯಾಂಟೀನ್ ಪ್ರತಿ ಜಿಲ್ಲಾ ಹಾಗೂ ತಾಲ್ಲೂಕು ಕೆಂದ್ರಗಳಲ್ಲಿ ಪ್ರಾರಂಭವಾಗಲಿದೆ.

ಜನವರಿ 1 ರಿಂದ ಪ್ರಾರಂಭವಾಗುವ ಇಂದಿರಾ ಕ್ಯಾಂಟೀನ್ ಸುಮಾರು ಪ್ರತಿ ತಿಂಗಳಿಗೆ 8.98 ಕೋಟಿ ಸರಕಾರಕ್ಕೆ ಖರ್ಚಾಗಲಿದೆಯಂತೆ.

ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೆಂದ್ರಗಳಲ್ಲಿ ನವೆಂಬರ್ ತಿಂಗಳೊಳಗೆ ಕ್ಯಾಂಟೀನ್ ಗೆ ಸೂಕ್ತ ಸ್ಥಳ

ಗುರುತಿಸ ಬೇಕೆಂದು ಹಾಗೂ ಡಿಸೆಂಬರ್ ಒಳಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಪೌರಾಡಳಿತ ಕ್ಕೆ ನಿರ್ದೇಶನ ನೀಡಲಾಗಿದೆ.

ಈ ಕ್ಯಾಂಟೀನ್ ನಡೆಸಲು ಬಹುತೇಕ ಮಹಿಳಾ ಸ್ವ-ಸಹಾಯ ಸಂಘಗಳಿಗೆ  ನೀಡಲಾಗುವುದು.

ಇನ್ನೂ ಮುಂದೆ ಹಳ್ಳಿಯಿಂದ ಆಸ್ಪತ್ರೆಗೆ ಅಥವ ಬೇರಾವೋದು ಕೆಲಸಗಳಿಗೆ ಬರುವ ಬಡವರಿಗೆ ಊಟ ತಿಂಡಿ ಸಿಗುತ್ತದೆ.