ಕೆಲವರಿಗೆ ರಾತ್ರಿಯಲ್ಲಾ ನಿದ್ದೆ ಬರುವುದಿಲ್ಲ. ಬೆಳಗಿನ ಜಾವ ಮಂಪರು ನಿದ್ರೆ ಬರುತ್ತದೆ. ಇದರಿಂದ ನಿತ್ಯದ ಕೆಲಸಕ್ಕೆ ತೊಂದರೆ ಆಗುತ್ತದೆ ಎಂದು ಡಾಕ್ಟರ್ ಬಳಿ ಹೋಗುತ್ತಿರ ಅಲ್ವ . ಹಾಗಾದರೆ ಇದನ್ನು ಒಮ್ಮೆ ಟ್ರೈ ಮಾಡಬಹುದಲ್ಲಾ.?

 ಜೀರಿಗೆ ಕಾಳಿನ ಸೇವನೆ ನಿಮ್ಮ ನಿದ್ರೆ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಇದರಲ್ಲಿ ಮೆಲಟೋನಿನ್ ಎಂಬ ಸಂಯುಕ್ತ ಇದ್ದು, ಇದು ನಿದ್ರೆಯನ್ನು ಹೆಚ್ಚಿಸುವಂತಹ ರಾಸಾಯನಿಕಗಳನ್ನು ನಮ್ಮ ದೇಹದಲ್ಲಿ ಅಧಿಕಗೊಳಿಸುತ್ತದೆ.

ಅರ್ಧ ಟೇಬಲ್ ಚಮಚದಷ್ಟು ಜೀರಿಗೆ ಪುಡಿಯನ್ನು ಒಂದು ಟೇಬಲ್ ಚಮಚದಷ್ಟು ಚೆನ್ನಾಗಿ ಮ್ಯಾಶ್ ಮಾಡಿದ ಬಾಳೆ ಹಣ್ಣಿನ ಜತೆಗೆ ಮಿಶ್ರಣ ಮಾಡಿ. ಮಲಗುವ ಮುಂಚೆ ಈ ಪೇಸ್ಟ್ ಅನ್ನು ಸೇವಿಸಿದರೆ ನಿದ್ರೆ ಚೆನ್ನಾಗಿ ಬರುತ್ತದೆ.