ಬೆಂಗಳೂರು: ನಿಮಗೆ ಈ ಲಕ್ಷಣಗಳು ಕಾಣಿಸಿಕೊಂಡರೆ ಟೆಸ್ಟ್ ಮಾಡಿಸಿಕೊಳ್ಳಿ. ಏಕೆಂದರೆ ಕೊರೋನಾ ರೋಗಿಗಳಲ್ಲಿ ಸಾಮಾನ್ಯವಾಗಿ ಜ್ವರ, ಒಣ ಕೆಮ್ಮು ಮತ್ತು ಆಯಾಸ ಕಾಣಿಸಿಕೊಳ್ಳುತ್ತದೆ.

ಇನ್ನು ಕೆಲವರಲ್ಲಿ ತಲೆನೋವು, ಗಂಟಲು ಕೆರೆತ, ಅತಿಸಾರ ಭೇದಿ, ಚರ್ಮದ ಮೇಲೆ ಗೆರೆ ಕಾಣಿಸಿಕೊಳ್ಳಲಿದ್ದು, ವಾಸನೆ ಗ್ರಹಿಕೆ & ರುಚಿ ಸ್ರವಿಸುವ ಶಕ್ತಿಯನ್ನೂ ಕಳೆದುಕೊಳ್ಳುತ್ತಾರೆ. ಇನ್ನು ತೀರಾ ಗಂಭೀರ ಸಮಸ್ಯೆ ಎಂದರೆ ಉಸಿರಾಟದ ತೊಂದರೆ, ಎದೆ ನೋವು, ಅಧಿಕ ರಕ್ತದೊತ್ತಡ, ಚಾಲನೆ ಮತ್ತು ಮಾತನಾಡುವ ಶಕ್ತಿ ಕಳೆದುಕೊಳ್ಳುತ್ತಾರೆ ಎಂದು ವೈದ್ಯರು ಪತ್ತೆಹಚ್ಚಿದ್ದಾರೆ.!