ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ದೇವರ ಮರಿಕುಂಟೆಯಲ್ಲಿ ಜೂನ್ 10 ರಂದು 25.2 ಮಿ.ಮೀ. ಹೆಚ್ಚು ಮಳೆಯಾಗಿದೆ. ಜಿಲ್ಲೆಯಲ್ಲಿ ವಿವಿಧೆಡೆಯಾದ ಮಳೆ ವಿವರ ಇಂತಿದೆ.
ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ಚಳ್ಳಕೆರೆ 10.2 ಮಿ.ಮೀ., ತಳಕು 3.2, ನಾಯಕನಹಟ್ಟಿ 19.6, ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಹಿರಿಯೂರು 1.4, ಬಬ್ಬೂರು 1, ಇಕ್ಕನೂರು 1, ಈಶ್ವರಗೆರೆ 1. ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಮತ್ತೋಡು 4.6, ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ 6.2, ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಭರಮಸಾಗರ 3.2, ತುರುವನೂರು 14.6, ಮೊಳಕಾಲ್ಮೂರು ತಾಲ್ಲೂಕು ವ್ಯಾಪ್ತಿಯ ಮೊಳಕಾಲ್ಮೂರು 11, ರಾಯಾಪುರ 4.6, ರಾಂಪುರ 9, ದೇವಸಮುದ್ರ 10 ಮಿ.ಮೀ ನಷ್ಟು ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.