ಚಿತ್ರದುರ್ಗ:  ಆನೆಗಳ ಹಾವಳಿ ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವುದು ಜನರಲ್ಲಿ ಭಯಬೀತರನ್ನಾಗಿಸಿದೆ. ನಿನ್ನೆ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಕಾಣಿಸಿಕೊಂಡಿದ್ದ ಆನೆ ಇಂದು ಚಿತ್ರದುರ್ಗದ ಆಯಿತೋಳು ಗ್ರಾಮದಲ್ಲಿ ಕಾಣಸಿಕೊಂಡಿದೆ.

ನಿನ್ನೆ ಯಿಂದ ಆನೆ ದಾಳಿಗೆ  ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆಯಿತೋಳು ಗ್ರಾಮದ ಪಾಪೇನಹಳ್ಳಿ ಬಳಿ ಎರಡು ಆನೆಗಳು ಬೀಡು ಬಿಟ್ಟಿದ್ದು ದಿನಕ್ಕೆ 40 ಕಿ.ಮೀ.ಕ್ರಮಿಸುವ ಆನೆಗಳು ಸಂಚರಿಸುತ್ತೆವೆ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.

ಇಂದು ಹೊಳಲ್ಕೆರೆ, ಸಿರಿಗೆರೆ ಮೂಲಕ ಚನ್ನಗಿರಿ ಅರಣ್ಯ ತಲುಪುವ ಸಾಧ್ಯತೆ ಎಂದು ಹೇಳುವ ಅಧಿಕಾರಿಗಳು ಈ ಆನೆಗಳು  ಭದ್ರಾ ಅರಣ್ಯದಿಂದ ಬಂದಿವೆ ಎಂದು ಶಂಕೆಯನ್ನು ವ್ಯಕ್ತಪಡಿಸುತ್ತಾರೆ.

ಹೊಳಲ್ಕೆರೆ  ಚನ್ನಗಿರಿ ಮೂಲಕ ಭದ್ರಾ ಸೇರಲಿವೆ ಆನೆಗಳ ಬಗ್ಗೆ ಹೊಳಲ್ಕೆರೆ, ಚನ್ನಗಿರಿ ಭಾಗದ ಜನರು ಜಾಗೃರಾಗಿರಬೇಕು  ಮತ್ತು ಆ ಭಾಗದಲ್ಲಿರುವ ಜಮೀನುಗಳಿಗೆ ತೆರಳುವ ಜನ ಇಂದು ಮತ್ತು ನಾಳೆ ಎಚ್ಚರವಾಗಿರ ಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ.