ಬೆಂಗಳೂರು : ನಿತ್ಯ ಪೆಟ್ರೋಲ್, ಡೀಸೆಲ್ ಏರಿಕೆ ಆಗುತ್ತಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಮಿನ್ಸ್ ಸ್ಕ್ವೇರ್ ವೃತ್ತದ ಆದಾಯ ತೆರಿಗೆ ಕಟ್ಟಡದ ಮುಂಭಾಗದಲ್ಲಿ ಕೆಪಸಿಸಿ ಧರಣಿ ಹಮ್ಮಿಕೊಂಡಿದ್ದು, ಈ ಧರಣಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಮನೆಯಿಂದಲೇ ಬೆಳಗ್ಗೆ 9.30 ಕ್ಕೆ ಸೈಕಲ್ ನಲ್ಲಿ ಹೊರಟು ಬೆಳಗ್ಗೆ 10 ಗಂಟೆಗೆ ಕೆಪಿಸಿಸಿ ಕಚೇರಿ ತಲುಪಲಿದ್ದಾರೆ.

ಕೆಪಿಸಿಸಿ ಕಚೇರಿಯಿಂದ ಬೆಳಗ್ಗೆ 10.30 ಕ್ಕೆ ಪಕ್ಷದ ನಾಯಕರು ಸೈಕಲ್ ಮೇಲೆ ತೆರಳಿ ತೆರಿಗೆ ಕಟ್ಟಡದ ಮುಂಭಾಗ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.