ಬೆಂಗಳೂರು : ಮಾರ್ಚ್ 14ರಂದು ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದಂತ ಧಾರ್ಮಿಕ ಕಾರ್ಯಕ್ರಮದಲ್ಲಿ ಕೊರೊನಾ ಶಂಕೆಯಿಂದ ಮೃತಪಟ್ಟ ಶಿರಾದ ವೃದ್ಧ ಸೇರಿ ತುಮಕೂರಿನಿಂದ 8 ಜನರು ಸೇರಿದಂತೆ 50ಕ್ಕೆ ಹೆಚ್ಚು ಜನರು ಭಾಗಿಯಾಗಿದ್ದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟ ಪಡಿಸಿದ್ದಾರೆ.

ಮಾರ್ಚ್ 14ರಂದು ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದಂತ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜ್ಯದಿಂದ 50ಕ್ಕೂ ಹೆಚ್ಚು ಜನರು ತೆರಳಿ, ಭಾಗವಹಿಸಿದ್ದಾರೆ. ತುಮಕೂರಿನಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ವೃದ್ದ ಕೂಡ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬುದಾಗಿ ತಿಳಿಸಿದ್ದಾರೆ.

ಇನ್ನೂ ಇವರಲ್ಲದೇ ರಾಜ್ಯದ ವಿವಿಧೆಡೆಗಳಿಂದ 50ಕ್ಕೆ ಹೆಚ್ಚು ಜನರು ಭಾಗವಹಿಸಿದ್ದ ಬಗ್ಗೆ ಮಾಹಿತಿ ಇದೆ. ತುಮಕೂರಿನ ಶಿರಾದ ವೃದ್ಧನೊಂದಿಗೆ 11 ಜನರು ಭಾಗವಹಿಸಿದ್ದು ತಿಳಿದು ಬಂದಿದೆ. ಎಲ್ಲರನ್ನೂ ಪತ್ತೆ ಹಚ್ಚಿ ಪ್ರತ್ಯೇಕವಾಗಿ ಇರಿಸಿ, ತೀವ್ರವಾಗಿ ನಿಗಾ ವಹಿಸಲಾಗಿದೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.