ನಾವು ಹಿಂದೆ ನಿಂತು ರಾಜಕೀಯ ಮಾಡೋರಲ್ಲಅಂತ ಯಾರಿಗೆ ಟಾಂಗ್ ಕೊಟ್ರು ಪ್ರಭಾಕರ ಕೊರೆ.!

ಬೆಳಗಾವಿ : ನಾವು ಹಿಂದೆ ನಿಂತು ರಾಜಕೀಯ ಮಾಡೋರಲ್ಲ ನಾವು ಲಕ್ಷ್ಮೀ ಪುತ್ರರೂ ಹೌದು, ಸರಸ್ವತಿ ಪುತ್ರರೂ ಹೌದು ಎಂದು ಪ್ರಭಾಕರ ಕೋರೆ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಆಪರೇಷನ್ ಕಮಲದಲ್ಲಿ ಕೋರೆಯವರು ಭಾಗಿಯಾಗಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರಭಾಕರ್ ಕೋರೆ ಪ್ರತಿಕ್ರಿಯೆ ನೀಡಿ ಉತ್ತರ ಕರ್ನಾಟಕದ ಜನರು ಮುಚ್ಚು ಮರೆ ಮಾಡುವುದಿಲ್ಲ, ಯಾವಾಗಲೂ ಮುಂದೆ ಶೆಡ್ಡು ಹೊಡೆದು ಮಾಡುತ್ತೇವೆ ಎಂದು ಹೇಳಿದರು.
ನಾನು ದಿನೇಶ್​ ಗುಂಡೂರಾವ್​ ಅವರ ತಂದೆಯೊಂದಿಗೆ ರಾಜಕಾರಣ ಮಾಡಿದ್ದೇನೆ.
ಕೋರೆ ಅವರ ಸ್ವಭಾವ ದಿನೇಶ್​ ಅವರಿಗೆ ತಿಳಿದಿಲ್ಲ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.