ಮುಂಬೈ: ಅತೃಪ್ತ ಶಾಸಕ ಭೈರತಿ ಬಸವರಾಜು ಅವರು ಇಂದು ಮುಂಬೈನಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದು, ನಾವು ಅಧಿಕಾರಕ್ಕಾಗಿ ರಾಜೀನಾಮೆ ನೀಡಿಲ್ಲ. ಬದಲಾಗಿ ಸ್ವಾಭಿಮಾನಕ್ಕಾಗಿ ರಾಜೀನಾಮೆ ನೀಡಿದ್ದೇವೆ ಎಂದರು.

ಅಭಿವೃದ್ಧಿ ಆಗದ ಕಾರಣ ಈ ನಿರ್ಧಾರ ಕೈಗೊಂಡಿದ್ದು, ನಮ್ಮ ಈ ಸಣ್ಣ ತಪ್ಪನ್ನು ಜನ ಕ್ಷಮಿಸಬೇಕು ಎಂದಿದ್ದಾರೆ. ಈ ವೇಳೆ ಮಾತನಾಡಿದ ಬಿ.ಸಿ.ಪಾಟೀಲ್, ನಾವು ಎಲ್ಲವನ್ನೂ ತ್ಯಾಗ ಮಾಡಿ ಬಂದಿದ್ದೇವೆ. ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗಿಲ್ಲ. ನಾಳೆ ನಡೆಯುವ ಅಧಿವೇಶನಕ್ಕೂ ನಾವು ಹಾಜರಾಗುವುದಿಲ್ಲ ಎಂದರು