ನಾಳೆ ದ್ವಿತೀಯ ಪಿಯುಸಿ ಪರೀಕ್ಷೇ ಫಲಿತಾಂಶ ಪ್ರಕಟ

ಬೆಂಗಳೂರು: 2018-2019ನೇ ಸಾಲಿನ ಪಿಯು ಫಲಿತಾಂಶ ಪ್ರಕಟವಾಗಲಿದ್ದು, ಎಲ್ಲಾ ಕಾಲೇಜುಗಳಲ್ಲಿ ಮಂಗಳವಾರ ಫಲಿತಾಂಶ ಪ್ರಕಟಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇನ್ನು ಇದೇ ಮೊದಲ ಬಾರಿಗೆ ಪಿಯು ಫಲಿತಾಂಶ ಸಿಇಟಿ ಪರೀಕ್ಷೆಗೂ ಮುನ್ನ ಪ್ರಕಟವಾಗುತ್ತಿದೆ. ಸಿಟಿಟಿ ಪರೀಕ್ಷೆಯೂ ಏಪ್ರಿಲ್​ 29, 30 ಮತ್ತು ಮೇ 1ರಂದು ನಡೆಯಲಿದ್ದು, ಈ ಮೂಲಕ ಬಹುತೇಕ ವಿದ್ಯಾರ್ಥಿಗಳು ಸಿಇಟಿ ಬರೆಯುವುದರಿಂದ ವಿದ್ಯಾರ್ಥಿಗಳ ಒತ್ತಡ ಕಡಿಮೆ ಮಾಡಿ ನಿರಾಳವಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಲಿದೆ.
ನಾಳೆ ಪಿಯು ಫಲಿತಾಂಶವನ್ನು ವಿದ್ಯಾರ್ಥಿಗಳು pue.kar.nic.in ಮತ್ತು www.karresults.nic.in ವೆಬ್​ಸೈಟಿನ ಮೂಲಕ ಫಲಿತಾಂಶ ನೋಡಬಹುದು. ಏಪ್ರಿಲ್​ 16ರ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಆಯಾ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟ ಮಾಡಲಾಗುತ್ತದೆ.

ನಾಳೆ ಫಲಿತಾಶ ನೋಡುವುದಕ್ಕೆ ಹೀಗೆ ಮಾಡಿ ಇಲಾಖೆ ನೀಡಿರುವ ಅಧಿಕೃತ ವೆಬ್​ಸೈಟ್​ pue.kar.nic.in ಮತ್ತು www.karresults.nic.in ನಲ್ಲಿ ಫಲಿತಾಂಶ ಲಭ್ಯವಿದೆ.