ಬೆಂಗಳೂರು: ನಾಳೆ ಸಿಇಟಿ ಪರೀಕ್ಷೆನಡೆಯಲಿದ್ದು ಬಹುತೇಕ ಪೋಷಕರು ಒಂದು ರೀತಿಯ ಆತಂಕದಲ್ಲಿದ್ದರೆ ಪರೀಕ್ಷೆ ಬರೆಯುವ ವಿದ್ಯಾರ್ಥಿ ಮನಸ್ಸಿನಲ್ಲಿ ತಳಮಳವಿರುತ್ತದೆ. ಆದ್ರೆ ಯಾವುದೇ ಕಾರಣಕ್ಕೂ ಭಯಭೀತರಾಗದೇ ಪರೀಕ್ಷೆಯನ್ನು ಎದುರುಗೊಳ್ಳಿ.

ಪರೀಕ್ಷೆಗಾಗಿ ನಿಮ್ಮ ತಯಾರಿ ಹೇಗೆ ನಡೆಸಿದ್ದೀರ. ಹಾಗದರೆ ಈ ವಿಷಯವನ್ನು ಗಮನದಲ್ಲಿಟ್ಟುಕೊಳ್ಳಿ.

18 ರ ಬೆಳಿಗ್ಗೆ ಪರೀಕ್ಷೆ 10-30 ರಿಂದ 11.50 ರವರೆಗೆ ವಿಷಯ ಜೀವವಿಜ್ಞಾನ ಕ್ಕೆ 60 ಅಂಕ, ಮಧ್ಯಾಹ್ನ 2-30 ರಿಂದ 3-50 ರವರೆಗೆ ಗಣಿತ 60 ಅಂಕ.

19 ರ ಬೆಳಿಗ್ಗೆ  10-30 ರಿಂದ 11.50 ರವರಗೆ ಭೌತವಿಜ್ಞಾನ 60 ಅಂಕ. ಮಧ್ಯಾಹ್ನ 2-30 ರಿಂದ 3-50 ರವರೆಗೆ ರಸಾಯನ ವಿಜ್ಞಾನ 60 ಅಂಕಗಳಿವೆ.

ಬೆಲ್ ಬಾರಿಸುವ 30 ನಿಮಿಷಕ್ಕೂ ಮುಂಚೆ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರಬೇಕು.

ಪರೀಕ್ಷೆ ಸಮಯದಲ್ಲಿ ಅಭ್ಯರ್ಥಿಗಳು ಕೈಗಡಿಯಾರ ಕಟ್ಟುವಂತಿಲ್ಲ. ಓಎಂಆರ್ ಉತ್ತರ ಪತ್ರಿಕೆಗಳಲ್ಲಿ ಶೇಡ್ ಮಾಡುವುದರ ಮೂಲಕ ಉತ್ತರಿಸಬೇಕು. ಉತ್ತರಗಳನ್ನು ಕಪ್ಪು ಅಥವಾ ನೀಲಿ ಮಸಿಯ ಪೆನ್ನುಗಳಿಂದ ಗುರುತಿಸ ಬೇಕು.

ಏನಿ ಹೌ ಚನ್ನಾಗಿ ಪರೀಕ್ಷೆ ಬರಿಯಿರಿ ಬೆಸ್ಟ್ ಆಫ್ ಲಕ್..