ವಿಧಾನಸಭೆ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಮುಂದಾಗಿರುವ ಚುನಾವಣಾ ಆಯೋಗ, ಅಬಕಾರಿ ಇಲಾಖೆ ಮತದಾನ ಆರಂಭಕ್ಕೂ 48 ಗಂಟೆಗಳ ಮೊದಲು ಮದ್ಯದಂಗಡಿಗಳನ್ನು ಬಂದ್ ಮಾಡಲು ಸೂಚನೆ ನೀಡಿದೆ.

ಮೇ 12 ರಂದು ಮತದಾನ ನಡೆಯಲಿರುವುದರಿಂದ ಮೇ 10 ರಂದು ಸಂಜೆ 5 ಗಂಟೆಯಿಂದ ಮದ್ಯ ಮಾರಾಟ ಬಂದ್ ಆಗಲಿದೆ. ಮೇ 11 ಮತ್ತು 12 ರಂದು ಮದ್ಯ ಮಾರಾಟ ನಿಷೇಧಿಸಲಾಗಿದೆ. ಮೇ 13 ಮತ್ತು 14 ರಂದು ಮದ್ಯದಂಗಡಿಗಳು ಓಪನ್ ಆಗಲಿವೆ. ಮತ ಎಣಿಕೆ ನಡೆಯಲಿರುವ ಮೇ 15 ರಂದು ಮತ್ತೆ ಮದ್ಯ ಮಾರಾಟಕ್ಕೆ ಬ್ರೇಕ್ ಬೀಳಲಿದೆ.

ಈಗಾಗಲೇ ಜಿಲ್ಲಾ ಚುನಾವಣಾಧಿಕಾರಿಗಳು ಸೂಚನೆ ನೀಡಿದ್ದು, ಎಲ್ಲಿಯೂ ಮದ್ಯ ಮಾರಾಟ ಮಾಡದಂತೆ ತಿಳಿಸಲಾಗಿದೆ. ಆದೇಶ ಉಲ್ಲಂಘಿಸಿದಲ್ಲಿ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.