ಬೆಂಗಳೂರು: ದೋಸ್ತಿ ಸರ್ಕಾರದ ನೂತನ ಸಚಿವರು ನಾಳೆ ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಲಿದ್ದು, ಆ ಮೂಲಕ ರಾಜ್ಯದಲ್ಲಿ ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದೆ. ಜೆಡಿಎಸ್ ಪಕ್ಷದಿಂದ ಯಾರು ಸಚಿವರಾಗಬೇಕೆಂಬುದು ಬಹುತೇಕ ಆಖೈರುಗೊಂಡಿದೆ. ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ನಿವಾಸದಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಅದರಂತೆ ಬಂಡೆಪ್ಪ ಕಾಶಂಪೂರ್, ಜಿ.ಟಿ.ದೇವೇಗೌಡ, ಎಚ್.ಡಿ.ರೇವಣ್ಣ, ಎಂ.ಸಿ.ಮನಗೋಳಿ, ಸಿ.ಎಸ್.ಪುಟ್ಟರಾಜು, ಎಂ.ಆರ್.ಶ್ರೀನಿವಾಸ್ (ವಾಸು), ಕೆ.ಶ್ರೀನಿವಾಸ್‍ಗೌಡ, ವೆಂಕಟರಾವ್ ನಾಡಗೌಡ, ಬಿ.ಎಂ.ಫಾರೂಕ್, ಬಸವರಾಜ ಹೊರಟ್ಟಿ, ಮಹೇಶ್ (ಬಿಎಸ್‍ಪಿ) ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ. ಎಚ್.ವಿಶ್ವನಾಥ್ ಅವರನ್ನು ವಿಧಾನಸಭೆ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಜಿಲ್ಲಾ ಪ್ರಾತಿನಿಧ್ಯ, ಜಾತಿವಾರು ಆದ್ಯತೆ, ಪಕ್ಷನಿಷ್ಠೆ, ಸೇವಾ ಹಿರಿತನ ಮುಂತಾದವುಗಳನ್ನು ದಿನೇಶ್ ಗುಂಡೂರಾವ್, ರೋಷನ್ ಬೇಗ್, ಕೆ.ಜೆ.ಜಾರ್ಜ್, ಸತೀಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್, ತುಕಾರಾಂ, ಬಸವರಾಜ ಪಾಟೀಲ್ ಹುಮ್ನಾಬಾದ್, ಎಂ.ಟಿ.ಬಿ.ನಾಗರಾಜ್, ಸಿ.ಎಸ್.ಶಿವಳ್ಳಿ, ಪ್ರತಾಪ್‍ಚಂದ್ರ ಶೆಟ್ಟಿ, ಉಮೇಶ್ ಜಾದವ್, ಶಾಮನೂರು ಶಿವಶಂಕರಪ್ಪ, ಪ್ರಿಯಾಂಕ್ ಖರ್ಗೆ, ಶಿವಶಂಕರ್‍ರೆಡ್ಡಿ, ಲಕ್ಷ್ಮಿ ಹೆಬ್ಬಾಳ್ಕರ್, ರೂಪಾ ಶಶಿಧರ್, ಆರ್.ವಿ.ದೇಶಪಾಂಡೆ ಅವರು ಸಂಪುಟಕ್ಕೆ ಸೇರುವುದು ಬಹುತೇಕ ಖಚಿತವಾಗಿದೆ  ಎಂದು ತಿಳಿದುಬಂದಿದ್ದು ಉಳಿದಂತೆಇನ್ನು ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಎಸ್.ಆರ್.ಪಾಟೀಲ್ ಅವರನ್ನು ಸಂಪುಟಕ್ಕೆ ಸೇರಿಸಬೇಕೆಂಬ ಒತ್ತಡ ಹೆಚ್ಚಾಗಿ ಕೇಳಿಬಂದಿದ್ದು ಕಡೇ ಗಳಿಗೆಯಲ್ಲಿ ಎರಡು ಪಕ್ಷದಲ್ಲಿ ಬದಲಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತ್ತಿಲ್ಲ.