ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ 17 ನೂತನ ಸಚಿವರಿಗೆ ನಾಳೆ ಖಾತೆ ಹಂಚಿಕೆ ಮಾಡಲಿದ್ದಾರೆ. ನಾಲ್ಕು ಡಿಸಿಎಂ ಹುದ್ದೆಗಳನ್ನು ಸೃಷ್ಠಿಸುವಾ ಸಾಧ್ಯತೆ ಇದೆಯಂತೆ

ಏಕೆಂದರೆ ಯಡಿಯೂರಪ್ಪನವರಿಗೆ 76 ವರ್ಷದ ಗಡಿ ದಾಟಿದೆ. ಬಿಜೆಪಿಯಲ್ಲಿ 75 ವರ್ಷ ಮೀರಿದವರಿಗೆ ಆಡಳಿತಾತ್ಮಕ ಹುದ್ದೆ ನೀಡುತ್ತಿಲ್ಲ. ಬಿ.ಎಸ್.ವೈ.ಗೆ ಮಾತ್ರ 75 ವರ್ಷದ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಹಾಗೂ ಆಡಳಿತವನ್ನು ಸುಸೂತ್ರವಾಗಿ ನಡೆಸಲು ನಾಲ್ಕು ಡಿಸಿಎಂ ಹುದ್ದೆಗಳನ್ನು ರೆಡಿಮಾಡಲಾಗುತ್ತದೆಯಂತೆ ಇದರಲ್ಲಿ

ಹಿಂದುಳಿದ ವರ್ಗದಿಂದ ಕೆ.ಎಸ್. ಈಶ್ವರಪ್ಪ, ಪರಿಶಿಷ್ಟ ಜಾತಿ ಅಥವಾ ವರ್ಗದಿಂದ ಗೋವಿಂದ ಕಾರಜೋಳ ಅಥವಾ ಬಿ.ಶ್ರೀರಾಮುಲು, ಒಕ್ಕಲಿಗ ಅಶ್ವತ್ಥನಾರಾಯಣ ಹಾಗೂ ಉತ್ತರ ಕರ್ನಾಟಕ ಕೋಟ ಲಕ್ಷ್ಮಣ್ ಸವದಿ ಅವರನ್ನು ಡಿಸಿಎಂ ಹುದ್ದೆಗೆ ನೇಮಿಸಬೇಕೆಂಬಬುದು ವರಿಷ್ಟರ ತೀರ್ಮಾನಕ್ಕೆ ಯಡಿಯೂರಪ್ಪರು ವಿರೋಧಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ನಾಳೆ ಎಲ್ಲದಕ್ಕೂ ತೆರೆ ಬೀಳಲಿದೆ.!