ಚಿತ್ರದುರ್ಗ: ಜಿಲ್ಲಾ ಸುದ್ದಿರಾಜಕೀಯಕೆಪಿಸಿಸಿ ಅಧ್ಯಕ್ಷರ ಪ್ರತಿಜ್ಞಾ ವಿಧಿ ಸಮಾರಂಭ ಅತ್ಯಂತ ವಿಭಿನ್ನವಾಗಿ ನಡೆಯಲಿದೆ-ಎಂ.ಕೆ.ತಾಜ್ ಪೀರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನ ಹಿಡಿದು ಅಧಿಕಾರ ಸ್ಪೀಕಾರ ಮಾಡಲಿದ್ದಾರೆಂದರೆ ಸಂವಿಧಾನದ ಆಶಯದಂತೆ ಅಧ್ಯಕ್ಷರು ನಡೆದುಕೊಳ್ಳಲಿದ್ದಾರೆ. ಇವರ ಜೊತೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ ಮತ್ತು ಸಲೀಂ ಅಹ್ಮದ್ ಅವರು ಕೂಡ ಪ್ರತಿಜ್ಞಾ ವಿಧಿ ಸ್ಪೀಕಾರ ಮಾಡಲಿದ್ದಾರೆ ಎಂದು ತಿಳಿಸಿದರು.

ಜು.2ರ ಗುರುವಾರ ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30ರವರೆಗೆ ಆಹ್ವಾನಿತ ಕಾಂಗ್ರೆಸ್ ನಾಯಕರುಗಳ ಸಮ್ಮುಖದಲ್ಲಿ ಜರುಗಲಿದೆ. ಇಡೀ ಕಾರ್ಯಕ್ರಮವನ್ನು ಟಿವಿಗಳಲ್ಲಿ ಬಿತ್ತರವಾಗಲಿದೆ. ಇದು ಕೇವಲ ಕಾಂಗ್ರೆಸ್ ಸೀಮಿತವಾದ ಕಾರ್ಯಕ್ರಮವಾಗದೆ ಎಲ್ಲರೂ ನೋಡುವಂತ ಕಾರ್ಯಕ್ರಮವಾಗಿದೆ ಎಂದು ಹೇಳಿದರು.