ಚಿತ್ರದುರ್ಗ: ಚಿತ್ರದುರ್ಗ ನಗರದ ವ್ಯಾಪ್ತಿಯಲ್ಲಿ ಬರುವ ಘಟಕ 4 ರಲ್ಲಿ ಪಿಳ್ಳೆಕೇರನಹಳ್ಳಿಗೆ ಹೊಸದಾಗಿ 11 ಕೆ.ವಿ.ಮಾರ್ಗವನ್ನು ನಿರ್ಮಾಣ ಮಾಡಲಾಗುತ್ತಿದ್ದು ನವಂಬರ್ 4 ರಂದು ಈ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

 ಆದ್ದರಿಂದ 66/11 ಉಪ ಕೇಂದ್ರದಿಂದ ಪೂರೈಕೆಯಾಗುವ ವಿವಿಧ ಮಾರ್ಗಗಳ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಪಿಳ್ಳೆಕೇರನಹಳ್ಳಿ, ಬಸವೇಶ್ವರ ನಗರ, ವಿದ್ಯಾನಗರ, ಮೆದೇಹಳ್ಳಿ, ಜಿ.ಆರ್.ಹಳ್ಳಿ, ಜೆ.ಎಂ.ಐ.ಟಿ ಕಾಲೇಜು ಹಿಂಭಾಗ ತಗರಳಬಾಳು ನಗರ, ಕೋಡಯ್ಯನಹಟ್ಟಿ, ಮಠದಕುರುಬರಹಟ್ಟಿ, ಅಗಸನಕಲ್ಲು, ಜೆ.ಸಿ.ಆರ್.ಬಡಾವಣೆ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಸುತ್ತಮುತ್ತ, ಹೊಳಲ್ಕೆರೆ ರಸ್ತೆ, ಬುರುಜನಹಟ್ಟಿ, ಸಂತೆಮೈದಾನ, ಮಹಾವೀರನಗರ, ನೆಹರು ನಗರ, ರೇಷ್ಮೆ ಇಲಾಖೆ, ಎಪಿಎಂಸಿ, ಗಾರೆಹಟ್ಟಿ, ಕವಾಡಿಗರಹಟ್ಟಿ, ತಿಪ್ಪಾರೆಡ್ಡಿ ಮಿಲ್ ಏರಿಯಾ, ಎಂ.ಆರ್.ನಗರ, ದಾವಣಗೆರೆ ರಸ್ತೆ, ಆಶ್ರಯ ಬಡಾವಣೆ ಪ್ರದೇಶಗಳಲ್ಲಿ ನ.4 ರಂದು ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಇರುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.