ನವದೆಹಲಿ: ರಾಜ್ಯದ ರಾಜಕೀಯ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದು, ಶುಕ್ರವಾರ ತ್ರಿಸದ್ಯ ಪೀಠ ಪ್ರಕರಣವನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಿದ್ದು, ಯಾರಿಗೂ ಬಹಳ ದಿನ ಅವಕಾಶ ನೀಡುವುದಿಲ್ಲ. ನಾಳೆಯೇ ವಿಶ್ವಾಸ ಮತ ವ್ಯಕ್ತಪಡಿಸಬೇಕು ಎಂದು ನ್ಯಾಯಾಧೀಶ ಎ.ಕೆ. ಸಕ್ರಿ ಸೂಚಿಸಿದ್ದಾರೆ.

ಪರ ಮತ್ತು ಪ್ರತಿವಾದ ಆಲಿಸಿದ ನ್ಯಾಯಾಧೀಶರು ನಾಳೆಯೇ ವಿಶ್ವಾಸಮತ ವ್ಯಕ್ತಪಡಿಸಬೇಕು. ಯಾರಿಗೂ ಈ ನಿಟ್ಟಿನಲ್ಲಿ ಬಹಳ ದಿನ ಅವಕಾಶ ನೀಡುವುದಿಲ್ಲ ಎಂದು ಸೂಚಿಸುವ ಮೂಲಕ ರಾಜ್ಯಪಾಲರು ಬಿಜೆಪಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನೀಡಿದ್ದ ೧೫ ದಿನಗಳ ಅವಧಿಯನ್ನು ನಿರಾಕರಿಸಿದ್ದು, ನಾಳೆಯೇ ವಿಶ್ವಾಸ ವ್ಯಕ್ತಪಡಿಸಬೇಕು ಎಂದು ಸುಪ್ರಿಂ ಕೋರ್ಟ್ ಸೂಚಿಸಿದೆ ಎಂದು ಟಿವಿ ಮಾಧ್ಯಮಗಳು ಬಿತ್ತರಿಸಿವೆ.