ನವದೆಹಲಿ: ನಾಳೆಯಿಂದ ಹೋಟೆಲ್ ಗಳು ತೆರೆಯಲು ಅನುಮತಿ ನೀಡಲಾಗಿದೆ.

ಆದರೆ ಹೋಟೆಲ್ ಮಾಲೀಕರು ಅನುಸರಿಸ ಬೇಕಾದ ನಿಯಮಗಳು ಏನೆಂದರೆ, ಹೋಟೆಲ್ ನಲ್ಲಿ ಸೋಪು, ಸ್ಯಾನಿಟೈಸರ್ ಇಡುವ ಜೊತೆಗೆ ಸಿಬ್ಬಂದಿ ಮಾಸ್ಕ್ ಮತ್ತು ಗ್ಲೌಸ್ ಧರಿಸಿರಬೇಕು.

ಪ್ರತ್ಯೇಕ ಪ್ರವೇಶ ಹಾಗೂ ನಿರ್ಗಮನ ದ್ವಾರಗಳಿರಬೇಕು, ಜನದಟ್ಟಣೆ ನಿಯಂತ್ರಿಸಬೇಕು, ಗ್ರಾಹಕರ ಲಗೇಜ್ ಗೆ ಸ್ಪ್ರೇ ಕಡ್ಡಾಯ.
ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಎಲ್ಲೂ ಉಗುಳಬಾರದು, ಸೀನುವಾಗಮತ್ತು ಕೆಮ್ಮುವಾಗ ಬಾಯಿಗೆ ಅಡ್ಡಲಾಗಿ ಕರ್ಚಿಫ್ ಹಿಡಿಯಬೇಕು, ರಿಸೆಪ್ಷನ್ ನಲ್ಲಿ ಗೆಸ್ಟ್ ಐಡಿ ಜೊತೆಗೆ ವಿಳಾಸ, ಟ್ರಾವೆಲ್ ಹಿಸ್ಟರಿ ನಮೂದಿಸಬೇಕು ಎಂದು ಹೇಳಿದೆ.

(ಸಾಂದರ್ಭಿಕ ಚಿತ್ರ)