ಬೆಂಗಳೂರು: ನಾಳೆಯಿಂದ ಹವಾ ನಿಯಂತ್ರಿತ ಬಸ್‌ಗಳ ಆರಂಭಿಸಲು ಕೆಎಸ್ಆರ್‌ಟಿಸಿ ತೀರ್ಮಾನಿಸಿದೆ. ಬೆಂಗಳೂರಿನಿಂದ ಮೈಸೂರು, ಮಂಗಳೂರು, ಕುಂದಾಪುರ, ಚಿಕ್ಕಮಗಳೂರು, ಮಡಿಕೇರಿ, ದಾವಣಗೆರೆ, ಶಿವಮೊಗ್ಗ, ವಿರಾಜಪೇಟೆಗೆ ಎಸಿ ಬಸ್‌ಗಳು ಸಂಚರಿಸಲಿವೆ.

ಬಸ್‌ಗಳಲ್ಲಿನ ತಾಪಮಾನ 24ರಿಂದ 25 ಸೆಲ್ಸಿಯಸ್‌ ಇರುವಂತೆ ನಿರ್ವಹಿಸಲು ಸಿಬ್ಬಂದಿಗೆ ಸೂಚಿಸಿದ್ದು, ಕೊರೋನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ರಾತ್ರಿ ಪ್ರಯಾಣದಲ್ಲಿ ಹೊದಿಕೆ ನೀಡದಿರಲು ನಿರ್ಧರಿಸಲಾಗಿದೆಯಂತೆ.