ನವದೆಹಲಿ : ಕೊರೊನಾ ಲಾಕ್ ಡೌನ್ ನಡುವೆ ರೈಲ್ವೆ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ನಾಳೆಯಿಂದ ವಿಶೇಷ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಹೌದು, ಲಾಕ್ ಡೌನ್ ಸಂಕಷ್ಟದಲ್ಲಿರುವ ಜನರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ನಾಳೆಯಿಂದ ದೆಹಲಿಯಿಂದ 15 ಸ್ಥಳಗಳಿಗೆ ರೈಲು ಸಂಚಾರ ಪ್ರಾರಂಭ ಮಾಡಲಿದೆ. ದೆಹಲಿಯಿಂದ ಬೆಂಗಳೂರು, ಮುಂಬೈ, ಅಹಮದಾಬಾದ್, ತಿರುವನಂತಪುರ, ಚೆನ್ನೈ, , ಅಗರ್ತಾಲಾ, ಪಾಟ್ನಾ, ಭುವನೇಶ್ವರ್, ಕೊಚ್ಚಿ, ಸೇರಿದಂತೆ ಹಲವು ಸ್ಥಳಗಳಿಗೆ ರೈಲು ಸೇವೆ ಪ್ರಾರಂಭವಾಗಲಿದೆ. ಪ್ರಯಾಣಿಕರು ಗಮನಿಸಬೇಕಾದ ಮುಖ್ಯವಾದ ವಿಷಯ ಅಂದರೆ ಆನ್ ಲೈನ್ ನಲ್ಲಿ ಮಾತ್ರ ಟಿಕೆಟ್ ಬುಕ್ಕಿಂಗ್ ಗೆ ಅವಕಾಶವಿರುತ್ತದೆ.

ಇಂದು ಸಂಜೆ 4 ಗಂಟಯಿಂದ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಲಿದ್ದು, ಮೇ 12 ರಿಂದ ಕೇಂದ್ರ ಸರ್ಕಾರ ಕೆಲವೇ ಕೆಲವು ರೈಲು ಸಂಚಾರಕ್ಕೆ ಅನುಮತಿ ನೀಡಿದೆ. ಇಂದಿನಿಂದ 15 ವಿಶೇಷ ರೈಲು ಗಳ ಸಂಚಾರ ಪ್ರಾರಂಭವಾಗಲಿದೆ.!