ಹುಬ್ಬಳ್ಳಿ: ಗ್ರಾಮೀಣ ಬ್ಯಾಂಕ್ ಗಳ ಖಾಸಗೀರಣ ವಿರೋಧಿಸಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ನೌಕರರು 26 ರಿಂದ 28 ವರೆಗೆ ಮುಷ್ಕರ ನಡೆಸಲಿದ್ದಾರೆ.

ರಾಜ್ಯದ ಪ್ರಗತಿ ಗ್ರಾಮೀಣ ಬ್ಯಾಂಕ್, ಕಾವೇರಿ ಗ್ರಾಮೀಣ ಬ್ಯಾಂಕ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮ ಒಟ್ಟು 1,680 ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ಅಧಿಕಾರಿಗಳು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ.

ನೌಕರರ ಬೇಡಿಕೆಗಳು:

ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಗ್ರಾಮೀಣ ಬ್ಯಾಂಕುಗಳು ನೌಕರರ ವೇತನ, ಸೇವಾ ಹಾಗೂ ಬಡ್ತಿ ನಿಯಮಾವಳಿಗಳಲ್ಲಿ ಸಮಾನತೆ ಜಾರಿಯಾಗಬೇಕು.

ಅನುಕಂಪ ಆಧಾರಿತ ನೇಮಕಾತಿ ಮಾಡಿಕೊಳ್ಳ ಬೇಕು.

ದಿನಗೂಲಿ ನೌಕರರ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಬೇಡಿಕೆಗಳನ್ನು ಇಟ್ಟುಕೊಂಡು ಹೋರಾಟವನ್ನು ನಡೆಸಲಾಗಿತ್ತದೆ ಎಂದು ಅಖಿಲ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟದ ಕಾರ್ಯದರ್ಶಿ ವಿ.ಕೆ ಬನ್ನಿಗೋಳ ತಿಳಿಸಿದ್ದಾರೆ.