ಬೆಂಗಳೂರು: ದೋಸ್ತಿ ಸರಕಾರದಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಮಂತ್ರಿ ಪಟ್ಟ ಸಿಕ್ಕಿಲ್ಲ ಶಾಸಕರುಗಳಿಗೆ ಮುನಿಸು ಮುಂದಿನ ನಡೆ ಬಗ್ಗೆ ಚಿಂತನೆ.!

ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಕಾಂಗ್ರೆಸ್- ಜೆಡಿಎಸ್ ಎರಡು ಪಕ್ಷದಲ್ಲಿ ಯಾರಿಗೂ ಮಂತ್ರಿ ಪಟ್ಟ ಸಿಕ್ಕಿಲ್ಲ.

ಚಿತ್ರದುರ್ಗ ಆರು ಕ್ಷೇತ್ರಗಳಲ್ಲಿ ಚಳ್ಳಕೆರೆ ಕ್ಷೇತ್ರದ ಶಾಸಕ ರಘುಮೂರ್ತಿ ಮಾತ್ರ ಗೆದಿದ್ದಾರೆ. ಅವರಿಗೆ ಮಂತ್ರಿ ಪಟ್ಟ ಸಿಗುವಂತೆ ಅವರ ಅಭಿಮಾನಗಳು ಒತ್ತಾಯಿಸಿ ಬೆಂಗಳೂರಿಗೆ ಹೊರಟಿದ್ದಾರೆ. ಪಕ್ಕದ ಜಿಲ್ಲೆ ದಾವಣೆಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಅಭಿಮಾನಿಗಳು ಪ್ರತಿಭಟನೆಯಲ್ಲಿ ನಿರತಾಗಿದ್ದಾರೆ. ಅದರಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ವರ್ ಅವರೊಬ್ಬರೆ ಗೆದಿದ್ದಾರೆ. ಅವರಿಗೂ ಮಂತ್ರಿ ಗಿರಿ ಸಿಕ್ಕಿಲ್ಲ ಅದರಂತೆ ಬಳ್ಳಾರಿ ಜಿಲ್ಲೆಗೂ ದೋಸ್ತಿ ಸರಕಾರದಲ್ಲಿ ಮಂತ್ರಿ ಗಿರಿ ಪಟ್ಟ ಸಿಗದೇ ಇರುವುದರಿಂದ ಗೆದ್ದ ಶಾಸಕರುಗಳಿಗೆ ಮುನಿಸು ಉಂಟಾಗಿದೆ. ಹಾಗಾಗಿ ನಾಲ್ಕು ಜಿಲ್ಲೆಗಳಲ್ಲಿ ಮಂತ್ರಿಗಿರಿ ಸಿಕ್ಕಿಲ್ಲ.!