ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ಜುಲೈ 21 ರಂದು 15.4 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ವಿವಿಧೆಡೆ ಆದ ಮಳೆ ವಿವರ ಇಂತಿದೆ.
ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ಚಳ್ಳಕೆರೆ 12.2, ಮಿ.ಮೀ., ಪರಶುರಾಂಪುರ 8.2, ದೇವರಮರಿಕುಂಟೆ 4.2, ತಳಕು 13.2, ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಹಿರಿಯೂರು 09, ಇಕ್ಕನೂರು 4.4, ಈಶ್ವರಗೆರೆ 5.4, ಮೊಳಕಾಲ್ಮೂರು ತಾಲ್ಲೂಕು ವ್ಯಾಪ್ತಿಯ ಮೊಳಕಾಲ್ಮೂರು 01, ರಾಯಾಪುರ 3.8, ರಾಂಪುರ 3.2, ದೇವಸಮುದ್ರ 10.2, ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಚಿತ್ರದುರ್ಗ-01 ರಲ್ಲಿ 0.6, ಚಿತ್ರದುರ್ಗ-02 ರಲ್ಲಿ 0.4, ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ ಹೊಳಲ್ಕೆರೆ 3.6, ರಾಮಗಿರಿ 3, ಹೆಚ್.ಡಿ. ಪುರ 7, ತಾಳ್ಯದಲ್ಲಿ 6.2 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.