ಬೆಂಗಳೂರು : ವಿಧಾನಸಭಾ ಚುನಾವಣೆಯ ಹೈ ಡ್ರಾಮ ಮುಕ್ತಾಯವಾಗಿದೆ. ನಿನ್ನಯವರೆಗೂ ನಾನೇ ಮುಖ್ಯ ಮಂತ್ರಿ ಎಂದು ಸಿದ್ದರಾಮಯ್ಯ ಹೇಳಿದ್ದರು. ಇವತ್ತು ದಲಿತ ಮುಖ್ಯ ಮಂತ್ರಿ ಆಗುತ್ತಾರೆ ಅಂದ್ರೆ ನನ್ನದೇನು ಅಭ್ಯಂತರವಿಲ್ಲ ಎಂದು ಸಿದ್ದರಾಮಯ್ಯರ ಹೊಸ ವರಸೆ.

ಇತ್ತ ಯಡಿಯೂರಪ್ಪನವರು ಆಗಲೇ ನಾನೇ ಮುಖ್ಯ  ಮಂತ್ರಿ . ಡೇಟ್ ಆಗಲೇ ಫಿಕ್ಸ್ ಎಂದು ಹೇಳಿದ್ದಾರೆ. ಅದಲ್ಲಪ್ಪ ನಾನೇ ಮುಖ್ಯ ಮಂತ್ರಿ ಎಂದು ಜೆಡಿಎಸ್ ಕುಮಾರಸ್ವಾಮಿ ಹೇಳಿದ್ದಾರೆ.

ಚುನಾವಣೆ ಸಮೀಕ್ಷೆಗಳು ಅತಂತ್ರವಾಗುತ್ತದೆ ಎಂದು ಹೇಳಿರುವ ಹಿನ್ನೆಲೆಯಲ್ಲಿ ಯಾರು ಮುಖ್ಯ ಮಂತ್ರಿ ಆಗುತ್ತಾರೆ ಎಂಬುದು ಮತ ಚಲಾಯಿಸಿದ ಮತದಾರರು ಗೊಂದಲವಾಗಿದ್ದಾರೆ.

ಏನಿ ಹೌ ಮತದಾರರೇನು  ಮೂರ್ಖರೇ. ನಾವೇ ಮುಖ್ಯ ಮಂತ್ರಿ ಎಂದು ಹೇಳುವ ಈ ಮೂರ್ಖರಿಗೆ ಜನಾದೇಶದ ಬಗ್ಗೆ ನಂಬಿಕೆ ಇದ್ದಂತ್ತಿಲ್ಲ. ಆದ್ರೆ 15 ರಂದು ಬರುವ ಫಲಿತಾಂಶದ ಬಗ್ಗೆ ಮತದಾರರು ಕಾಯುತ್ತಿದ್ದಾರೆ..!