ಬೆಂಗಳೂರು: ಮಾಧ್ಯಮದವರು ಕೇಳುವ ಪ್ರಶ್ನೆಗಳಿಗೆ ರಾಜಕಾರಣಿಗಳು ಕೆಲವು ಸಲ ಗರಂ ಆಗ್ತಾರೆ. ನಾನು ಹೇಳೋದು  ಕೇಳಪ್ಪ. ಅಂತ ಇಂದು ಡಿಸಿಎಂ ಪರಮೇಶ್ವರ್ ಅಂದು ಮಾಜಿ ಮಂತ್ರಿ ಸಿದ್ದರಾಮಯ್ಯರು ಮಾಧ್ಯಮದವರ ಮೇಲೆ ಗರಂ ಆದ ಪ್ರಸಂಗವಿದೆ.

ಇಂದು ಚಿತ್ರದುರ್ಗಕ್ಕೆ ಡಿಸಿಎಂ ಪರಮೇಶ್ವರ್ ಬಂದಾಗ ಮಾಧ್ಯಮದವರು ಸರಕಾರದ ಬಗ್ಗೆ ಪಶ್ನೆ ಮಾಡಿದಾಗ, ನಾವು ಅಧಿಕೃತವಾಗಿ ಐದು ವರ್ಷ ಸರಕಾರ ನಡೆಸುತ್ತೇವೆ. ನಾನು ಪಕ್ಷದ ಅಧ್ಯಕ್ಷ ಹೇಳುತ್ತಿದ್ದೇನೆ. ಇಲ್ಲಿ ಕೇಳಪ್ಪ ಅಂತ ಹೇಳಿದ್ರು.

ತಿರುಗಿ ಮುರುಗಿ ಕೇಳಿದ್ರು ಅದನ್ನೇ ಹೇಳುವುದು ಅಂತ ಉಪ ಮುಖ್ಯ ಮಂತ್ರಿ ಜಿ.ಪರಮೇಶ್ವರ್ ಹೇಳಿಬಿಡುವುದೇ.

ಕಳೆದವಾರ ಬಜೆಟ್ ಗೆ ಸಂಬಂಧಿಸಿದಂತೆ ಮಾಜಿ ಮಂತ್ರಿ ಸಿದ್ದರಾಮಯ್ಯರನ್ನು ಮಾಧ್ಯಮದವರು ಕೇಳಿದಾಗ ಏ ಇಲ್ಲಿ ಕೇಳಪ್ಪ ಅಂತ ಹೇಳಿದ್ರು.

ಮಾಧ್ಪ್ರಯಮದವರು ಕೇಳುವ ಪ್ರಶ್ನೆಗೆ  ತಾಳ್ಮೆಯಿಂದ ಉತ್ತರಿಸ ಬೇಕಾದ್ದು ಚುನಾಯಿತ ಪ್ರತಿನಿಧಿಗಳ ಕರ್ತವ್ಯ ಅದು ಬಿಟ್ಟು ಯಾವದೋ ಸಿಟ್ಟನ್ನು ಮಾಧ್ಯಮದವರ ಮೇಲೆ ಏ.. ಕೇಳ್ರಪ್ಪ ಇಲ್ರಿ ಅಂತ  ಹೇಳಿದ್ರೆ..?