ಬೆಂಗಳೂರು: ನಮ್ಮ ಪಕ್ಷದ  ಕಾರ್ಯಕರ್ತರಲ್ಲಿ  ನಾನು ಮುಖ್ಯಮಂತ್ರಿಯಾಗಿರುವುದಕ್ಕೆ  ಸಂತೋಷವಿದೆ, ಆದರೆ ನಾನು ಸಂತೋಷವಾಗಿಲ್ಲ ಎಂದು ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಿಎಂ ಕುಮಾರಸ್ವಾಮಿ, ನಾನು ಮೆರೆಯಬೇಕೆಂದು ಸಿಎಂ ಆಗಿಲ್ಲ, ನಾನು ಹೋದಕಡೆ ಜನ ಸೇರ್ತಾರೆ, ಸಂತೋಷ ಪಡ್ತಾರೆ. ಆದರೆ ಜನರು ನನ್ನ ಪಕ್ಷಕ್ಕೆ ಬಹುಮತ ನೀಡುವುದಿಲ್ಲ. ಈ ಬಗ್ಗೆ ನನಗೆ ನೋವಿದೆ ಎಂದು ಸನ್ಮಾನ ಸಭೆಯಲ್ಲಿ ಕುಮಾರಸ್ವಾಮಿ ಭಾವುಕರಾಗಿ ನುಡಿದಿದ್ದಾರೆ. ನಾನು ಪೂರ್ಣ ಬಹುಮತ ದೊರೆತು ಸಿಎಂ ಆಗಿಲ್ಲ, ಸಧ್ಯಕ್ಕೆ ಸನ್ಮಾನ ಸ್ವೀಕರಿಸುವಂತೆ ಬಲವಂತ ಮಾಡಬೇಡಿ ಎಂದು ಹೇಳಿದರು.