ಬೆಂಗಳೂರು : ನನ್ನ ರಾಜೀಕೀಯ ಪ್ರಾರಂಭವೇ ಕಾಂಗ್ರೆಸ್. ನಾನು ಮೂಲ ಕಾಂಗ್ರೆಸಿಗ ಅಂತ ಮಾಜಿ ಪ್ರಧಾನ ಮಂತ್ರಿ ದೇವೇಗೌಡರು ಹೇಳಿದರು.ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ತೆಗೆದುಕೊಂಡ ಕೆಲವು ಕಹಿ ಅನುಭವಗಳಿಂದ ಕಾಂಗ್ರೆಸ್ ನಿಂದ ಹೊರ ಬರುವಂತ್ತಾಯಿತು ಎಂದು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮನಬಿಚ್ಚಿಮಾತನಾಡಿದರು.

ಅಂಕಿತ ಪ್ರಕಾಶನ ಮುದ್ರಿಸಿರುವ ‘ಭಾರತದ ಸಂಸತ್ತು- ಒಂದು ಕಾರ್ಯನಿರತ ಪ್ರಜಾಪ್ರಭುತ್ವ’ ಪುಸ್ತಕವನ್ನು ಭಾನುವಾರ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.  ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದವರು ನಹೆರು ಎಂದು ಹೇಳಿದರು.

ಈ ಪುಸ್ತಕ ವಿಧಾನಪರಿಷತ್ತಿನ ಮಾಜಿ ಸಭಾಪತಿ ಬಿ.ಎಲ್‌.ಶಂಕರ್‌ ಹಾಗೂ ಪ್ರೊ.ವಲೇರಿಯನ್‌ ರೊಡ್ರಿಗನ್‌ ಅವರು ಇಂಗ್ಲಿಷ್‌ನಲ್ಲಿ ಹೊರತಂದಿದ್ದ ‘ಇಂಡಿಯನ್‌ ಪಾರ್ಲಿಮೆಂಟ್‌’ ಪುಸ್ತಕವನ್ನು ಪ್ರೊ.ಜೆ.ಎಸ್‌.ಸದಾನಂದ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ.