ಮಂಡ್ಯ : ನಾನು ಮಣ್ಣಿನ ಮಗ. ಕೃಷಿ ಕುಟುಂಬದಿಂದ ಬಂದವನು ಬಿ.ಎಸ್ ಯಡಿಯೂರಪ್ಪ ಹೇಳಿದಂತೆ ನಾನು ಪ್ರಚಾರ ಗಿಟ್ಟಿಸಲು ಭತ್ತದ ನಾಟಿಗೆ ಹೋಗುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ನಾಟಿ ಕಾರ್ಯಕ್ರಮಕ್ಕೆ ಬಿಜೆಪಿ ಮಾಡಿರುವ ಟೀಕೆಗೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ. ಸೀತಾಪುರ ಗ್ರಾಮಕ್ಕೆ ಪ್ರಚಾರ ಗಿಟ್ಟಿಸಲು ಹೋಗುತ್ತಿಲ್ಲ, ನಾನು ಹುಟ್ಟಿದ್ದೇ ರೈತ ಕುಟುಂಬದಲ್ಲಿ, ನಾವು ಬೆಳೆದಿದ್ದು, ಕೃಷಿ ವಾತಾವರಣದಲ್ಲಿ, ನನಗೆ ನಾಟಿ ಮಾಡೋದು ಹೊಸದೇನಲ್ಲ ಎಂದರು.

ಬಿಜೆಪಿಯವರು ಇದನ್ನು ರಾಜಕೀಯವಾಗಿ ತೆಗೆದುಕೊಂಡರೆ ಏನು ಮಾಡೋಕೆ ಆಗೋಲ್ಲ. ಆದ್ರೆ ಬಿಜೆಪಿಯವರಿಗೆ ರೈತರ ಬಗ್ಗೆ  ಕಿಂಚಿತ್ತು  ಕಾಳಜಿ ಇಲ್ಲ ಎಂದು ಹೇಳಿದರು.